ಹುಬ್ಬಳ್ಳಿ: ಇಲ್ಲಿಯ ಕೋಯಿನ್ ರಸ್ತೆಯ ಕೆ.ಎಲ್.ಇ. ಕೋ-ಆಪರೇಟಿವ್ ಆಸ್ಪತ್ರೆಯಲ್ಲಿ ಅ. 11ರಂದು ಬೆಳಗ್ಗೆ 10ಕ್ಕೆ ಕಿವಿ, ಮೂಗು, ಗಂಟಲಿನ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ವಿಶೇಷವಾಗಿ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಟಾನ್ಸಿಲ್ (ಗಲಗ್ರಂಥಿ) ಗಳಿಗೆ ಸಂಬಂಧಿಸಿದ ರೋಗದ ತಪಾಸಣೆ ಮತ್ತು ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು.
ತಜ್ಞ ವೈದ್ಯರು ಉಚಿತ ತಪಾಸಣೆ ಕೈಗೊಳ್ಳುವರು. ಸಾರ್ವಜನಿಕರು ಆಧಾರ್ ಕಾರ್ಡ್ ನೊಂದಿಗೆ ಶಿಬಿರಕ್ಕೆ ಆಗಮಿಸಲು ಕೆ.ಎಲ್.ಇ. ಜೆ.ಜಿ.ಎಂ.ಎಂ. ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಶಾರದಾ ಮೆಟಗುಡ್ ಮತ್ತು ಕೋ-ಆಪರೇಟಿವ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವೈ.ಎಫ್. ಹಂಜಿ ಪ್ರಕಟಣೆಯಲ್ಲಿ ಕೋರಿದ್ದಾರೆ.