

ಹುಬ್ಬಳ್ಳಿ: ಇಲ್ಲಿಯ ಕೊಯಿನ್ ರಸ್ತೆ ಕೆಎಲ್ಇ ಹುಬ್ಬಳ್ಳಿ ಕೋ- ಆಪರೇಟಿವ್ ಆಸ್ಪತ್ರೆಯಲ್ಲಿ ಅ. 25ರಂದು ಬೆಳಗ್ಗೆ 10ಕ್ಕೆ ಕಿವಿ, ಮೂಗು, ಗಂಟಲಿನ (ಇಎನ್ಟಿ) ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ವಿಶೇಷವಾಗಿ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಟಾನ್ಸಿಲ್ ಗೆ (ಗಲಗ್ರಂಥಿ) ಸಂಬಂಧಿಸಿದ ರೋಗದ ತಪಾಸಣೆ ಉಚಿತ ಮತ್ತು ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು.
ನುರಿತ ತಜ್ಞ ವೈದ್ಯರು ತಪಾಸಣೆ ಕೈಗೊಳ್ಳುವರು.
ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್ ನೊಂದಿಗೆ ಶಿಬಿರಕ್ಕೆ ಬರಲು ಕೆಎಲ್ಇ ಜೆ.ಜಿ.ಎಂ.ಎಂ. ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಶಾರದಾ ಮೆಟಗುಡ್ ಮತ್ತು ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವೈ.ಎಫ್. ಹಂಜಿ ಪ್ರಕಟಣೆಯಲ್ಲಿ ಕೋರಿದ್ದಾರೆ.