ಇಎನ್‌ಟಿ ತಜ್ಞರ ವರದಿ ಪರಿಗಣಿಸಿ: ಶ್ರವಣ ದೋಷ ಪ್ರಮಾಣಪತ್ರಕ್ಕೆ ಸೂಚನೆ

ENT Dr
Published on

ಬೆಂಗಳೂರು: ಶ್ರವಣದೋಷ ವಿಕಲಚೇತನ ವೈದ್ಯಕೀಯ ಪ್ರಮಾಣವನ್ನು ಇಎನ್‌ಟಿ ತಜ್ಞ ವೈದ್ಯರು ದೃಢೀಕರಿಸಿದ ನಂತರವಷ್ಟೇ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸಂಬಂಧಪಟ್ಟ ವೈದ್ಯಕೀಯ ಮಂಡಳಿಗಳ ಸಮಿತಿಯು ಶ್ರವಣಶಾಸಜ್ಞರು ನೀಡಿದ ಪ್ಯೂರ್‌ಟೋನ್ ಆಡಿಯೋಮೀಟರ್ ಪರೀಕ್ಷೆ, ಎಇಬಿಆರ್/ಎಬಿಇಆರ್ ಪರೀಕ್ಷಾ ವರದಿಯಲ್ಲಿ ನಮೂದಿಸುವ ಶ್ರವಣದೋಷ ಶೇಕಡವಾರು ಪ್ರಮಾಣ ಪತ್ರವನ್ನು ಇಎನ್‌ಟಿ ತಜ್ಞ ವೈದ್ಯರು ನಮೂದಿಸಿದ ನಂತರವಷ್ಟೇ https://www.swavlambancard.gov.in/ ಪೋರ್ಟಲ್ ಮೂಲಕ ವಿತರಿಸಬೇಕು ಎಂದು ಸೂಚಿಸಲಾಗಿದೆ.

ಕೆಲವರು ಶ್ರವಣದೋಷ ವಿಕಲಚೇತನದ ನಕಲಿ ಪ್ರಮಾಣಪತ್ರ ಸಲ್ಲಿಸಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿಕಲಚೇತನ ಮೀಸಲಾತಿ ಅಡಿಯಲ್ಲಿ ಸರ್ಕಾರಿ ಉದ್ಯೋಗ ಪಡೆಯುತ್ತಿರುವುದು ಇಲಾಖೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net