ಕಿವಿ ಮೂಗು ಗಂಟಲು ತಪಾಸಣೆ ಶಿಬಿರ

Published on

ಹುಬ್ಬಳ್ಳಿ: ಇಲ್ಲಿಯ ಕೊಯಿನ್ ರಸ್ತೆಯ ಕೆಎಲ್ಇ ಕೋ -ಆಪರೇಟಿವ್ ಆಸ್ಪತ್ರೆಯಲ್ಲಿ ನ. 23ರಂದು ಬೆಳಗ್ಗೆ 10ಕ್ಕೆ ಕಿವಿ, ಮೂಗು, ಗಂಟಲಿನ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಟಾನ್ಸಿಲ್ (ಗಲಗ್ರಂಥಿ) ಗಳಿಗೆ ಸಂಬಂಧಿಸಿದ ರೋಗದ ತಪಾಸಣೆ ಮಾಡಲಾಗುವುದು.

ಆಸಕ್ತ ಮಕ್ಕಳ ಪಾಲಕರು ಶಿಬಿರದ ಸದುಪಯೋಗ ಪಡೆದುಕೊಳ್ಳಲು ಕೆಎಲ್ಇ ಜೆ.ಜಿ.ಎಂ.ಎಂ. ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಎಂ.ಜಿ. ಹಿರೇಮಠ ಮತ್ತು ಕೋ -ಆಪರೇಟಿವ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವೈ.ಎಫ್. ಹಂಜಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net