ಶಿಮಂತೂರು ದೈವಗಳ ಪ್ರತಿಷ್ಠಾಪನೆ

Mul_Shimantur
Published on

ಮೂಲ್ಕಿ: ಮುಲ್ಕಿ ಸೀಮೆಯ ಶಿಮಂತೂರು ಬಾವ ಗೃಹಪ್ರವೇಶ, ದೈವಗಳ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.

ಶಿಮಂತೂರು ವಿಷ್ಣುಮೂರ್ತಿ ಭಟ್ ಪೌರೋಹಿತ್ಯದಲ್ಲಿ ಗುರುವಾರ ಸಾಯಂಕಾಲ 6.30ಕ್ಕೆ ದೇವತಾ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ ಸಪ್ತ ಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ, ದೈವಗಳ ಬಿಂಬಾಧಿವಾಸ, ಅಧಿವಾಸ ಹೋಮ ನಡೆಯಿತು.

ಶುಕ್ರವಾರ ಬೆಳಗ್ಗೆ ಪುಣ್ಯಾಹ, ಪಂಚಗವ್ಯ ಗಣಪತಿ ಹೋಮ, ಪ್ರತಿಷ್ಠಾಪನಾ ಹೋಮ, ಪಂಚವಿಂಶತಿ ಕಲಶ, ಕಲಶಾಧಿವಸ ಹೋಮ, ಬೆಳಗ್ಗೆ 8.50ಕ್ಕೆ ಕುಂಭ ಲಗ್ನದಲ್ಲಿ ಗೃಹಪ್ರವೇಶ, ದೈವಗಳ ಪ್ರತಿಷ್ಠಾಪನೆ, 11.15ಕ್ಕೆ ಮೀನ ಲಗ್ನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ತೀರ್ಥ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು.

ಶಾಸಕ ಉಮಾನಾಥ ಕೋಟ್ಯಾನ್, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಜೀವನ್ ಶೆಟ್ಟಿ ಕಾರ್ನಾಡ್, ಶಿಮಂತೂರು ಭಾವ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net