ಅರಸೀಕೆರೆಯಲ್ಲಿ ದೊಡ್ಡಗಣಪತಿ ಪ್ರತಿಷ್ಠಾಪನೆ

08arsph1ep
ಗಣಪತಿ ಪೆಂಡಾಲಿನಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ.
Published on

ಅರಸೀಕೆರೆ: ನಗರದ ಗ್ರಂಥಾಲಯ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಪೆಂಡಾಲಿನಲ್ಲಿ ಶನಿವಾರ ಭಕ್ತರ ಜಯಘೋಷದೊಂದಿಗೆ ದೊಡ್ಡ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು.


ಗರುಡನಗಿರಿ ರಸ್ತೆಯಲ್ಲಿರುವ ಕಲಾವಿದ ಹಾರನಹಳ್ಳಿ ಮಹದೇವ್ ಅವರ ನಿವಾಸದಿಂದ ಟ್ರ್ಯಾಕ್ಟರ್ ಮೂಲಕ ಮಂಗಳವಾದ್ಯ ಗಳೊಂದಿಗೆ ಪೇಟೆಬೀದಿ ಮೂಲಕ ಪೆಂಡಾಲಿಗೆ ಕರೆತರಲಾಯಿತು. ಭಕ್ತ ಸಮೂಹದ ಜಯಘೋಷದ ನಡುವೆ ಭಕ್ತ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಪ್ರತಿಷ್ಠಾಪನಾ ಕಾರ್ಯ ವಿಧ್ಯುಕ್ತವಾಗಿ ನೆರವೇರಿತು.


ಗಣೇಶ ಮೂರ್ತಿಯನ್ನು ಕರೆತರುವ ಮಾರ್ಗ ಮಧ್ಯೆ ರಸ್ತೆಗಳನ್ನು ರಂಗೋಲಿ ಹಾಕಿ ತಳಿರು, ತೋರಣಗಳಿಂದ ಶೃಂಗರಿಸಲಾಗಿತ್ತು. ಮುತ್ತೈದೆಯರು ಆರತಿ ಮಾಡಿ ವಿನಾಯಕನನ್ನು ಸಂಭ್ರಮದಿಂದ ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net