ದಾಖಲಾತಿ ಆಂದೋಲನ, ಮಕ್ಕಳಿಂದ ಜಾಗೃತಿ ಜಾಥಾ

Tavaragera Enrollment movement awareness
ತಾವರಗೇರಾದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಮಾಧ್ಯಮಿಕ ವಿಭಾಗದ ಮಕ್ಕಳಿಂದ ಶಾಲಾ ದಾಖಲಾತಿ ಅಂದೋಲನ ನಡೆಯಿತು.
Published on

ತಾವರಗೇರಾ: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನ ದಾಖಲಾತಿ ಆಂದೋಲನ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಂದ ಜಾಗೃತಿ ಜಾಥಾ ನಡೆಯಿತು.

ಪ್ರಮುಖ ರಸ್ತೆಗಳಲ್ಲಿ ಶಾಲೆಬಿಟ್ಟ ಮಗುವನ್ನು ತರಗತಿಗೆ ಸೇರಿಸಿರಿ ಎಂದು ಘೋಷಣೆ ಕೂಗಲಾಯಿತು. ಜಾಥಾ ಕುಂಬಾರ ಓಣಿ, ಹಳೇ ಬಸ್ ನಿಲ್ದಾಣದ ಬಸವೇಶ್ವರ ಸರ್ಕಲ್ ಮೂಲಕ ಮಾಧ್ಯಮಿಕ ಶಾಲೆಗೆ ಬಂದಿತು.

ಮುಖ್ಯಶಿಕ್ಷಕ ಪರಸಪ್ಪ ಹೊಸಮನಿ, ಸಿಆರ್‌ಪಿ ಕಾಶಿನಾಥ ನಾಗಲಿಕರ, ಶಿಕ್ಷಕರಾದ ಮಲ್ಲಂಗಸಾಬ ವಾಲೆಕಾರ್, ಸಾಜಿದಪಾಷಾ ಮುಲ್ಲಾ, ರಮೇಶ್ ಪೂಜಾರ, ಜನಾರ್ದನ, ಶೋಭಾ, ಬಸಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net