ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿ

22 yelandur 01
Published on


ಚಾಮರಾಜನಗರ : 18 ವರ್ಷ ತುಂಬಿರುವ ಪ್ರತಿಯೊಬ್ಬರು ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡುವ ಮೂಲಕ ಮತದಾನ ಹಕ್ಕನ್ನು ಹೊಂದಬೇಕು ಎಂದು ತಾಲೂಕು ಕಚೇರಿ ಶಿರಸ್ತೇದಾರ್ ನಾಗರಾಜು ಸಲಹೆ ನೀಡಿದರು.


ಚುನಾವಣಾ ಸಾಕ್ಷರತಾ ಸಂಘ ಹಾಗೂ ತಾಲೂಕು ಆಡಳಿತದ ವತಿಯಿಂದ ಶ್ರೀ ವೈ.ಎಂ.ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಒಟ್ಟು 44 ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ನೀಡುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಣಿ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳಿಗೆ ಮತದಾನ ಸಹಾಯವಾಣಿ ಆ್ಯಪ್ ಮತ್ತು ಮತದಾರರ ಪಟ್ಟಿಯ ನೋಂದಣಿ ಮತ್ತು ಮಾಹಿತಿ ನೀಡಲಾಯಿತು. ಕಾಲೇಜಿನ ಉಪನ್ಯಾಸಕರಾದ ಅರುಣ್, ಗಿರಿಜಾ, ಡಾ.ಲಿಖಿತಾ, ಎಸ್.ಅನುರಾಧಾ, ಮಹಾಂತೇಶ, ದಾಕ್ಷಾಯಣಿ, ಪದ್ಮ, ವಾಸುದೇವ್, ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net