ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ

Enroll children in government schools.
ಬಾದಾಮಿ ತಾಲೂಕಿನ ಗಿಡ್ಡನಾಯಕನಾಳ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೂಮಿ ಪೂಜೆ ನೆರವೇರಿಸಿದರು.
Published on

ಬಾದಾಮಿ: ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸುವ ಮೂಲಕ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಗ್ರಾಮಸ್ಥರಿಗೆ ಮನವಿ ಮಾಡಿದರು.

ಬಾದಾಮಿ ಮತಕ್ಷೇತ್ರದ ಗಿಡ್ಡನಾಯಕನಾಳ ಗ್ರಾಮದಲ್ಲಿ ಮಂಗಳವಾರ ಅವರು 14.50 ಲಕ್ಷ ರೂ. ವೆಚ್ಚದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ, ರೂ. 5.00 ಲಕ್ಷ ವೆಚ್ಚದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ, ಸಮುದಾಯ ಭವನ ಹಾಗೂ ರೂ. 5.00 ಲಕ್ಷ ವೆಚ್ಚದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸರಕಾರ ಶಾಲಾ ಮಕ್ಕಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಸಿಯೂಟ, ಮೊಟ್ಟೆ, ರಾಗಿಮಾಲ್ಟ್, ಸಮವಸ, ಶೂ ಸಾಕ್ಷ, ಅರ್ಹ ವಿದ್ಯಾರ್ಹತೆಯ ಶಿಕ್ಷಕರ ನೇಮಕ, ಹೀಗೆ ರಾಜ್ಯದಲ್ಲಿ ಶಿಕ್ಷಣ ಸಲುವಾಗಿ ಸರಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾ.ಪಂ. ಸದಸ್ಯ ಬಸವರಾಜ ಡೊಳ್ಳಿನ, ಯುವ ಮುಖಂಡ ನಿಂಗನಗೌಡ ಜನಾಲಿ, ಬಿಇಒ ಕೇಶವ ಪೆಟ್ಲೂರ, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ ಸೇರಿದಂತೆ ಗಿಡ್ಡನಾಯಕನಾಳ ಗ್ರಾಮದ ಗ್ರಾ.ಪಂ. ಸದಸ್ಯರು, ಹಿರಿಯರು, ಯುವಕರು, ಮಹಿಳೆಯರು, ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net