ಎಣ್ಮಕಜೆ ಗ್ರಾಪಂ ಕೃಷಿಕರ ದಿನಾಚರಣೆ

krishi
ಎಣ್ಮಕಜೆ ಪಂಚಾಯಿತಿ ಕೃಷಿಕ ದಿನಾಚರಣೆಯಲ್ಲಿ ಸಾಧಕ ಕೃಷಿಕರನ್ನು ಗೌರವಿಸಲಾಯಿತು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಗ್ರಾ.ಪಂ.ಉಪಾಧ್ಯಕ್ಷೆ ರಂಲ ಇಬ್ರಾಹಿಂ, ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಮತ್ತಿತರರಿದ್ದರು.
Published on

ಪೆರ್ಲ: ಎಣ್ಮಕಜೆ ಗ್ರಾಪಂನ ಕೃಷಿ ಭವನದ ವತಿಯಿಂದ ಸಿಂಹ ಮಾಸ 1ನ್ನು ಕೃಷಿಕರ ದಿನವನ್ನಾಗಿ ಶನಿವಾರ ಆಚರಿಸಲಾಯಿತು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಉದ್ಘಾಟಿಸಿ ಮಾತನಾಡಿ, ಆಹಾರ, ಭಾಷೆ, ಸಂಸ್ಕಾರ ಇವು ಕೃಷಿಯೊಂದಿಗೆ ಅವಿನಾಭಾವದ ಸಂಬಂಧ ಹೊಂದಿದ್ದು ನಮ್ಮ ಪಾರಂಪರಿಕ ಕೃಷಿ ವಲಯನ್ನು ಆಧುನಿಕ ಕೃಷಿ ಪದ್ಧತಿಯೊಂದಿಗೆ ಜೋಡಿಸುವ ಜತೆಗೆ ಯುವ ಜನಾಂಗವನ್ನು ಕೃಷಿಯತ್ತ ಆಕರ್ಷಿಸಲು ಪ್ರಯತ್ನಿಸುವ ಕಾರ್ಯ ಶ್ಲಾಘನೀಯ ಎಂದರು.

ಗ್ರಾ.ಪಂ.ಉಪಾಧ್ಯಕ್ಷೆ ರಂಲ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ನಾರಾಯಣ ನಾಯ್ಕ, ಬ್ಲಾಕ್ ಪಂಚಾಯಿತಿ ಸದಸ್ಯ ಬಟ್ಟು ಶೆಟ್ಟಿ ಕಾಟುಕುಕ್ಕೆ, ಕೆ.ಪಿ.ಅನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಭಿ ಹನೀಫ್, ಪಂಚಾಯಿತಿ ಸದಸ್ಯರಾದ ರೂಪವಾಣಿ ಆರ್.ಭಟ್, ನರಸಿಂಹ ಪೂಜಾರಿ, ರಾಮಚಂದ್ರ ಎಂ., ಉಷಾ ಕುಮಾರಿ, ಆಶಾಲತಾ, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಮಾತನಾಡಿದರು.

ಕೃಷಿಕ ಲೋಕನಾಥ ಶೆಟ್ಟಿ, ಕೃಷಿ ಕಾರ್ಮಿಕ ಕೃಷ್ಣ ಬೈರ, ಹಿರಿಯ ಕೃಷಿಕ ಕಿಞ್ಞಣ್ಣ ರೈ, ವೀರಪ್ಪ ಗೌಡ, ಕೃಷಿಕೆ ಶಾಲಿನಿ, ಗಂಗಾಧರ ನಾಯಕ್ ಸನೋಜ್ ಅವರನ್ನು ಸನ್ಮಾನಿಸಲಾಯಿತು. ಭವ್ಯ ಮತ್ತು ರಮ್ಯಾ ಪ್ರಾರ್ಥನೆಗೈದರು. ಕೃಷಿ ಅಧಿಕಾರಿ ನಿತಿನ್ ಬಿ.ಕೆ.ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ಲ ಕುಞ್ಞೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net