

ಮುದ್ದೇಬಿಹಾಳ : ಅಭ್ಯುದಯ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ 175 ವಿದ್ಯಾರ್ಥಿಗಳು 5 ದಿನಗಳ ಕಾಲ ನಾಲ್ಕು ಜ್ಯೋರ್ತಿಲಿಂಗ, ಹಾಲುಮತ ಸಮಾಜದ ಪ್ರಥಮ ಮಹಾರಾಣಿ ಮಧ್ಯಪ್ರದೇಶದ ಇಂದೋರ್ನ ಅಹಲ್ಯಾಬಾಯಿ ಹೋಳ್ಕರ್ ಸೇರಿ ಹಲವು ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸುರತವಾಗಿ ಮರಳಿ ಬಂದಿದ್ದಾರೆ ಎಂದು ಅಹಲ್ಯಾಬಾಯಿ ಹೋಳ್ಕರ್ ಶಿಣ ಸಂಸ್ಥೆ ಸಂಸ್ಥಾಪಕ ಅಧ್ಯ ಎಂ.ಎನ್.ಮದರಿ ಹರ್ಷ ವ್ಯಕ್ತಪಡಿಸಿದರು.
ಮಂಗಳವಾರ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿ, ಶಿಕರನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಇಲ್ಲಿನ ಸಾರಿಗೆ ಟಕದ ಬಸ್ಗಳ ಚಾಲಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಪ್ರವಾಸದಿಂದ ವಿದ್ಯಾರ್ಥಿಗಳ ಜ್ಞಾನವೃದ್ಧಿಯಾಗುತ್ತದೆ. ಉಜ್ಜಯಿನಿಯ ಮಹಾಕಾಲೇಶ್ವರ, ನರ್ಮದಾ ನದಿ ದಂಡೆಯ ಮೇಲಿನ ಖಾಂಡ್ವಾದಲ್ಲಿರುವ ಓಂಕಾರೇಶ್ವರ, ನಾಶಿಕ್ನ ತ್ರೆಂಬಕೇಶ್ವರ, ಔರಂಗಾಬಾದ್ನ ಗ್ರಿಷ್ಣೇಶ್ವರ ಜ್ಯೋರ್ತಿಲಿಂಗ ದರ್ಶನ ಪಡೆದು ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ ಎಂದರು.
ಇದಲ್ಲದೆ ಶಿರಡಿ, ಅಜಂತಾ&ಎಲ್ಲೋರಾ, ಹಾಲುಮತ ಸಮಾಜದ ಪ್ರಥಮ ಮಹಾರಾಣಿ ಇಂದೋರನ ಅಹಲ್ಯಾಬಾಯಿ ಹೋಳ್ಕರ್, ವಿಶ್ವದ ಅತಿ ಎತ್ತರದ ಪ್ರತಿಮೆ ಎನ್ನುವ ಹೆಗ್ಗಳಿಕೆ ಹೊಂದಿರುವ ಗುಜರಾತ್ನ ಕೆವಾಡಾದ ನರ್ಮದಾ ನದಿಯಲ್ಲಿರುವ ಸರ್ದಾರ ವಲ್ಲಭಭಾಯಿ ಪಟೇಲರ ಮೂರ್ತಿ ಸಂದರ್ಶಿಸಿ ಇತಿಹಾಸದ ಅರಿವು ಮೂಡಿಸಿಕೊಂಡರು ಎಂದರು.
ಸಾರಿಗೆ ಸಂಸ್ಥೆ ಚಾಲಕರಾದ ಕೊಟ್ರೇಶ ಹರನಾಳ, ಚಂದಪ್ಪ ವಳಕಲದಿನ್ನಿ, ಶಿವಣ್ಣ ಅಂಬಣ್ಣನವರ್, ಬಸವರಾಜ ಮದರಿ, ಸಂಗಯ್ಯ ಕಟ್ಟಿ, ಸಂಗಯ್ಯಮುತ್ಯಾ ಹಿರೇಮಠ, ಬೆಳ್ಳೆಪ್ಪ ಜಿಂಗಾನಿ, ಯಮನೂರಿ ಮೇಟಿ, ಜುಮ್ಮಣ್ಣ ಹಾದಿಮನಿ ಅವರನ್ನು ಎಂ.ಎನ್.ಮದರಿ ಸನ್ಮಾನಿಸಿದರು.
ಪ್ರತಿಭಾವಂತ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಊಟ, ವಸತಿ ಸಹಿತ ಉಚಿತ ಶಿಣ ನೀಡುತ್ತಿರುವ ನಮ್ಮ ಸಂಸ್ಥೆಯ ಶೈಣಿಕ ಪ್ರವಾಸವು ಮಾದರಿಯಾಗಿದೆ. ವಿದ್ಯಾರ್ಥಿಗಳಿಗೆ ನಾಲ್ಕು ಗೋಡೆಯ ಮಧ್ಯೆ ಪಠ್ಯದ ಜೊತೆಗೆ ಹೊರಗಿನ ಪ್ರಪಂಚದ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿದ್ದೇವೆ. > ಎಂ.ಎನ್.ಮದರಿ, ಸಂಸ್ಥಾಪಕರು, ಅಭ್ಯುದಯ ಕಾಲೇಜ್