ನಿರಂತ ಸಾಹಿತ್ಯದ ಅಧ್ಯಯನದಿಂದ ಜ್ಞಾನವೃದ್ಧಿ

30bhr 1
Published on

ಬಾಳೆಹೊನ್ನೂರು: ನಿರಂತರವಾಗಿ ಸಾಹಿತ್ಯ ಅಧ್ಯಯನ ಮಾಡುವುದರಿಂದ ಜ್ಞಾನ ವೃದ್ಧಿಯಾಗಲಿದೆ ಎಂದು ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಎಸ್.ಸಾಗರ್ ಹೇಳಿದರು.

ರೇಣುಕನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ವಿವಿಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ, ಪಠ್ಯೇತರ ಚಟುವಟಿಕೆಗಳು ಸಹ ಅಗತ್ಯ.ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅಪಾರ ಜ್ಞಾನ, ಸಾಹಿತ್ಯದ ಅರಿವೂ ಆಗಲಿದೆ ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷಭಟ್ ಮಾತನಾಡಿ, ಕನ್ನಡದ ಮೂಲ ಕಾಗುಣಿತವಾಗಿದ್ದು, ಇಂದಿನ ವಿದ್ಯಾರ್ಥಿಗಳು ಆಂಗ್ಲ ಭಾಷೆ ವ್ಯಾಮೋಹದಲ್ಲಿ ಕನ್ನಡದ ಮೂಲವನ್ನೇ ಮರೆಯುತ್ತಿದ್ದಾರೆ. ಕನ್ನಡ ಕಾಗುಣಿತವನ್ನು ಕಲಿತರೆ ಕನ್ನಡದ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ.

ಚರ್ಚಾ ಸ್ಪರ್ಧೆಯ ಪರ ವಿಭಾಗದಲ್ಲಿ ಪಿ.ಕೀರ್ತಿನಾ(ಪ್ರಥಮ), ಸುದರ್ಶಿನಿ(ದ್ವಿತೀಯ), ಯೋಗಿನಿ (ತೃತೀಯ), ವಿರೋಧ ವಿಭಾಗದಲ್ಲಿ ರಶ್ಮಿತಾ (ಪ್ರಥಮ), ರೇಚಲ್ (ದ್ವಿತೀಯ), ಆಶುಭಾಷಣ ಸ್ಪರ್ಧೆಯಲ್ಲಿ ಾತಿಮಾ ನೆಹರು ಬಾನು (ಪ್ರಥಮ), ಅಂಜಲಿ (ದ್ವಿತೀಯ), ಸ್ಥಾನ ಪಡೆದರು. ಛದ್ಮವೇಷ ಸ್ಪರ್ಧೆಯಲ್ಲಿ ಮೆಲ್ವಿನಾ (ಪ್ರಥಮ), ಬಿ.ಎಸ್.ಅಗಸ್ತ್ಯ (ದ್ವಿತೀಯ),ಪ್ರತೀಕ್ಞಾ (ತೃತೀಯ), ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net