ಜೀವನ ಅನುಭವಿಸು, ಸಾವು ಪ್ರೀತಿಸು

NIJAGUNAPRABHU
Published on

ಮುಂಡರಗಿ: ಮನುಷ್ಯ ಜೀವನವನ್ನು ಅನುಭವಿಸಬೇಕು. ಸಾವನ್ನು ಪ್ರೀತಿಸಬೇಕು. ಸಾವಿನ ಭಯ ಇದ್ದರೆ ಎಲ್ಲವನ್ನೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಲಿಂಗಪೂಜೆಯಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಧರ್ಮ ಪ್ರವಚನದಲ್ಲಿ ಆಶೀರ್ವಚನ ನೀಡಿದ ಅವರು, ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು ಎಂದಿದ್ದಾರೆ ಬಸವಣ್ಣ. ಇಷ್ಟಲಿಂಗ ಕಟ್ಟಿಕೊಂಡು ಧೈರ್ಯದಿಂದ ಸಾಧಿಸಿ ಬಾಳಬೇಕು. ಮನುಷ್ಯನಿಗೆ ಧೈರ್ಯ ತುಂಬುವ ದೈವ ಇಷ್ಟಲಿಂಗ. ಶಿವಯೋಗ ಸಾಧನೆ, ರಾಜಯೋಗ, ಮನಸಿನ ಯೋಗ ಮಾಡಿದವರಿಗೆ ಆತ್ಮಸ್ಥೈರ್ಯ ಇರುತ್ತದೆ ಎಂದರು.

ಮನುಷ್ಯ ಸೃಷ್ಟಿಯ ಅನುಭಾವವನ್ನು ಅನುಭವಿಸದೇ ಸೋತಿರುವ ಜೀವಿ. ಪರಸ್ಪರ ಒಡನಾಟದಿಂದ ಅನುಭಾವ ದೊರೆಯುತ್ತದೆ. ದೈವಿಕ ಜೀವನಕ್ಕೆ, ನಗುವಿಗೆ, ನೋಟಕ್ಕೆ ಶಿವಯೋಗ, ಅಂತರಂಗದ ತರಂಗದ ಧ್ವನಿ ಶಿವಯೋಗ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net