

ಅಂಕೋಲಾ: ಸಾಹಿತ್ಯ ಕ್ಷೇತ್ರದಲ್ಲಿ ಅಂಕೋಲೆಯ ಸಾಹಿತಿಗಳು ತಮ್ಮದೆ ಆದ ಕೊಡುಗೆ ನೀಡುವ ಮೂಲಕ ಕನ್ನಡ ಸಾರಸ್ವತ ಲೋಕದ ಗರಿಮೆ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ ಎಂದು ಕರ್ನಾಟಕ ಸಂಘದ ಗೌರವಾಧ್ಯಕ್ಷ ಪೊ›.ಕೆ. ವಿನಾಯಕ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ಸಂಘದಿಂದ ಶನಿವಾರ ಆಯೋಜಿಸಿದ್ದ ದಿನಕರ ದೇಸಾಯಿ ಸ್ಮರಣೆ, ಸನ್ಮಾನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಹೇಶ ನಾಯಕ ಹಿಚ್ಕಡ, ಖಜಾಂಚಿ ಎಸ್.ಆರ್. ನಾಯಕ, ಡಾ. ವಿನಾಯಕ ಹೆಗಡೆ, ಉಪನ್ಯಾಸಕ ಮಂಜುನಾಥ ಇಟಗಿ ನಿರ್ವಹಿಸಿದರು. ಕರ್ನಾಟಕ ಸಂಘದ ವಿವಿಧ ಪದಾಧಿಕಾರಿಗಳಾದ ವಿಠ್ಠಲ ಗಾಂವಕರ, ರವೀಂದ್ರ ಕೇಣಿ, ಶ್ರೀಧರ ನಾಯಕ, ಪ್ರವೀರ ನಾಯಕ, ಪುಷ್ಪಾ ನಾಯ್ಕ ಇದ್ದರು.
ಸನ್ಮಾನ-ಬಹುಮಾನ ವಿತರಣೆ : ರಾಷ್ಟ್ರೀಯ ಗಜಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ಶ್ರೀದೇವಿ ಕೆರೆಮನೆ ಮತ್ತು ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ರೇಣುಕಾ ರಮಾನಂದ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕರ್ನಾಟಕ ಸಂಘ ಮತ್ತು ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಏರ್ಪಡಿಸಿದ್ದ ಬೇಂದ್ರೆ ಬದುಕು- ಬರಹ ಪ್ರಬಂಧ ಸ್ಪರ್ಧೆಯಲ್ಲಿ ಮಹಿಳಾ ಗೌಡ (ಪ್ರಥಮ), ನೀಹಾ ಪಡವಳಕರ್ (ದ್ವಿತೀಯ), ಸಂಗೀತಾ ವಾಲ್ಮಕಿ (ತೃತೀಯ) ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡ 26 ಸ್ಪರ್ಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.