

ವಿಜಯಪುರ : ನಗರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಾನ ಕಾಲೇಜಿನಲ್ಲಿ ಜು, 14 ರಿಂದ ಜು. 18 ರವರೆಗೆ ಅಂತಿಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಸಾಮರ್ಥ್ಯ, ತಾರ್ಕಿಕತೆ ಮತ್ತು ಸಂವಹನ ಕೌಶಲ್ಯಗಳ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಟ್ಯಾಲೆಂಟ್ ಬ್ಯಾಟಲ್ನ ಸಂಪನ್ಮೂಲ ವ್ಯಕ್ತಿ ಕೆ. ಸಾಹು ಅವರು, ವಿದ್ಯಾರ್ಥಿಗಳ ಸಾಮರ್ಥ್ಯ ಕೌಶಲ್ಯಗಳ ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ ನೀಡಿದರು.
ಪ್ರಾಂಶುಪಾಲ ಡಾ. ಮಂಜುನಾಥ ಪಿ. ಅವರು, ವಿದ್ಯಾರ್ಥಿಗಳು ತಮ್ಮ ಾನ ಸುಧಾರಿಸಲು ಮತ್ತು ಅವರ ಆತ್ಮವಿಶ್ವಾಸ ಹೆಚ್ಚಿಸಲು ವಿಶೇಷವಾಗಿ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಕ್ಯಾಂಪಸ್ ಸಂದರ್ಶನಗಳು, ಬ್ಯಾಂಕಿಂಗ್ ಪರೀೆಗಳು ಮತ್ತು ಸರ್ಕಾರಿ ಉದ್ಯೋಗಾವಕಾಶಗಳಿಗಾಗಿ ಸಾಮರ್ಥ್ಯ, ತಾರ್ಕಿಕತೆ ಮತ್ತು ಸಂವಹನ ಕೌಶಲ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಅಂತಿಮ ವರ್ಷದ 50 ಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗಿಯಾಗಿದ್ದರು. ಮಹಾವಿದ್ಯಾಲಯದ ಉದ್ಯೋಗಾಧಿಕಾರಿ ಪ್ರಶಾಂತ ಪಾಟೀಲ, ಎಂಸಿಎ ವಿಭಾಗದ ಮುಖ್ಯಸ್ಥ ಗಿರೀಶ ಕುಲಕರ್ಣಿ ಮತ್ತಿತರರಿದ್ದರು.