

ಕೆರೂರ: ವಿದ್ಯಾದೇವತೆ ಸರಸ್ವತಿ ಮಾತೆಯನ್ನು ವಿದ್ಯಾರಂಭಕ್ಕೂ ಮುಂಚೆ ಶ್ರದ್ಧಾಭಕ್ತಿಯಿಂದ ಪೂಜಿಸುವುದರಿಂದ ಜ್ಞಾನ ಸಂಪತ್ತು ವೃದ್ಧಿ ಆಗುತ್ತದೆ ಎಂದು ರಾಮಭಟ್ಟ ಜೋಶಿ ಹೇಳಿದರು.
ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂಥ ಕಷ್ಟ ಕಾಲದಲ್ಲಿಯೂ ನಮ್ಮನ್ನು ಕೈಬಿಡದೆ ನಮ್ಮೊಂದಿಗಿರುವ ಜ್ಞಾನ ಜಗತ್ತಿನಲ್ಲಿ ಅತಿ ಶ್ರೇಷ್ಠವಾಗಿದೆ. ಜ್ಞಾನದೇವತೆ ತಾಯಿ ಸರಸ್ವತಿ ದೇವಿಯನ್ನು ನಿಷ್ಕಲ್ಮಶ ಮನಸ್ಸಿನಿಂದ ಪೂಜಿಸುವುದು, ಶ್ಲೋಕ ಪಠಿಸುವುದರಿಂದ ಜ್ಞಾನ ಸಂಪತ್ತು ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಅಕ್ಷರಾಭ್ಯಾಸದ ಪ್ರಯುಕ್ತ ಬನಶಂಕರಿ ದೇವಿಗೆ ಸರಸ್ವತಿ ದೇವಿ ಅಲಂಕಾರ ಮಾಡಲಾಗಿತ್ತು. ಹಲವಾರು ಚಿಣ್ಣರು ಅಕ್ಷರಭ್ಯಾಸದಲ್ಲಿ ಪಾಲ್ಗೊಂಡಿದ್ದರು.
ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ಸಿಲ್ ನೀಡಲಾಯಿತು.
ಅರ್ಚಕ ಯಂಕಣ್ಣ ಗುಡಿಸಾಗರ, ಸುನೀಲ ಗುಡಿಸಾಗರ ರಾಚೋಟೇಶ್ವರ ಕುದರಿ, ಬಸು ಸಣ್ಣಕ್ಕಿ, ಶಿವಪ್ಪ ಹೆಬ್ಬಳ್ಳಿ, ಮಯೂರ ರೂಡಗಿ ನವೀನ ಕ್ವಾಣ್ಣೂರ, ಬಸು ಚಿತ್ತರಗಿ, ಶ್ರೀಧರ ಲಂಗಟದ ಇತರರಿದ್ದರು.