ಪುಸ್ತಕಗಳ ಅಧ್ಯಯನದಿಂದ ಜ್ಞಾನ ವೃದ್ಧಿ

h19-librarians day
Published on

ಹುಬ್ಬಳ್ಳಿ: ನಗರ ಹೊರವಲಯದ ಕೊಟಗೊಂಡಹುಣಶಿಯಲ್ಲಿನ ಕೆಎಲ್​ಇ ಸಂಸ್ಥೆಯ ಜೆಜಿಎಂಎಂ ವೈದ್ಯಕೀಯ ಕಾಲೇಜ್​ನಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ ಸ್ಮರಣಾರ್ಥ ಇತ್ತೀಚೆಗೆ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು.

ಪ್ರಾಚಾರ್ಯ ಡಾ.ಎಂ.ಜಿ. ಹಿರೇಮಠ ಅವರು ರಂಗನಾಥನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗ್ರಂಥಾಲಗಳು ದೇವಾಲಯ ಇದ್ದಂತೆ. ಪ್ರತಿಯೊಂದು ಜ್ಞಾನ ಭಂಡಾರವೇ ಇದರಲ್ಲಿದೆ. ನಿತ್ಯವೂ ಪುಸ್ತಕಗಳನ್ನು ಅಧ್ಯಯನ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.

ಗ್ರಂಥಾಲಯ ಪ್ರಭಾರಿ ಡಾ. ಸಾವಿತ್ರಿ ಸಿದ್ದನಗೌಡರ್, ಮುಖ್ಯ ಗ್ರಂಥಪಾಲಕಿ ಡಾ. ವೀಣಾ ಯಶವಂತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net