ಅಂಬೇಡ್ಕರ್ ಸಾಧನೆ ಅಧ್ಯಯನದಿಂದ ಜ್ಞಾನವೃದ್ಧಿ

ಡಾಕ್ಟರ್ ಬಿ ಆರ್ ಅಂಬೇಡ್ಕರ್ 1a
Published on

ಸಾಲಿಗ್ರಾಮ: ಆಸ್ತಿ, ಹಣ ಮಾಡುವುದಕ್ಕಿಂತ ಬದಲಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಬರಹ ಹಾಗೂ ಸಾಧನೆಗಳನ್ನು ಅಧ್ಯಯನ ಮಾಡಿದರೆ ಜ್ಞಾನದಲ್ಲಿ ಶ್ರೀಮಂತರಾಗುತ್ತೇವೆ ಎಂದು ಶಾಸಕ ಡಿ.ರವಿಶಂಕರ್ ಅಭಿಪ್ರಾಯಪಟ್ಟರು.

ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದಲ್ಲಿ ಜೈ ಭೀಮ್ ಸಂಘಟನೆಯಿಂದ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳುವಂಥ ಶಕ್ತಿಯನ್ನು ಸಂವಿಧಾನ ನೀಡಲಿದೆ ಎಂದು ತಿಳಿಸಿದರು.

ಎಲ್ಲ ಸಮಾಜದ ಏಳಿಗೆಗೆ ಸ್ಪಂದಿಸಿದಂತಹ ಮಹಾನ್ ನಾಯಕರು ಅಂಬೇಡ್ಕರ್. ಹಾಗಾಗಿ ಇಡೀ ಜಗತ್ತೇ ಅವರನ್ನು ವಿಶ್ವ ಜ್ಞಾನಿ ಎಂದು ಕರೆದಿದೆ. ಹಾಗಾಗಿ ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹನಸೋಗೆ ಗ್ರಾಮದಲ್ಲಿ ಚುನಾವಣೆಗೂ ಮುನ್ನ ಗ್ರಾಮದ ಸಮಸ್ಯೆಗಳ ಕುರಿತು ತಿಳಿಸಿದ್ದರು. ಅದರಲ್ಲಿ ಈಗಾಗಲೇ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಇನ್ನುಳಿದಂತೆ ರಸ್ತೆ, ದೇವಸ್ಥಾನ ಹಾಗೂ ಸಮುದಾಯ ಭವನ ಸೇರಿದಂತೆ ಇತರ ಕೆಲಸಗಳನ್ನು ಹಂತ ಹಂತವಾಗಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಎಲ್ಲ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಲ್ಲ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಡ್ಯ ಮಹಾದೇವಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್, ಶಾರದಾ ರಾಮಚಂದ್ರ, ಶಿಕ್ಷಕ ದೇವರಾಜ್, ಮಹಾದೇವಿ, ಸುರೇಶ್, ಸೋಮಶೇಖರ್, ಮುತ್ತುರಾಜ್, ಸಂಘದ ಅಧ್ಯಕ್ಷ ಕುಮಾರ್, ಯಜಮಾನ್ ಮಹದೇವ್, ಯೋಗೇಶ್, ಮರಿಯಯ್ಯ, ರಮೇಶ್, ಚೆಲುವನಾಯಕ, ನವೀನ್, ಪರಮೇಶ್, ಪ್ರಾಂಶುಪಾಲ ಡಾ. ಕೃಷ್ಣ, ಗುತ್ತಿಗೆದಾರ ನಾಗರಾಜ್, ಸಿದ್ದಯ್ಯ, ಸುರೇಶ್ ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net