ಮನುಷ್ಯ ಮನುಷ್ಯರ ನಡುವೆ ಬಾಂಧವ್ಯ ವೃದ್ಧಿ

byn (2)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎನ್ನುವ ಸರಳ ಸಂದೇಶ ವಿಶ್ವಕ್ಕೆ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಸಾರ್ವಕಾಲಿಕ ಸಿದ್ಧಾಂತ, ಸಾಮಾಜಿಕ ನ್ಯಾಯ ಪರಿಕಲ್ಪನೆಯೊಂದಿಗೆ ಇಂದಿನ ಯುವ ಪೀಳಿಗೆ ಹೆಜ್ಜೆ ಇಡಬೇಕು. ಮನುಷ್ಯ ಮನುಷ್ಯರ ನಡುವೆ ಬಾಂಧವ್ಯ ವೃದ್ಧಿಸಬೇಕು. ಪ್ರೀತಿ ವಿಶ್ವಾಸಗಳಿಂದ ಬಾಳಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ತಾಲೂಕು ಆಡಳಿತ ವತಿಯಿಂದ ಭಾನುವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಜೀವನದ ಸಾರ್ಥಕತೆ ಕುರಿತು ಯಾರಲ್ಲೂ ಚಿಂತನೆ ಇಲ್ಲ. ಸಮಾಜದ ಜನರಲ್ಲಿ ಸಾತ್ವಿಕತೆ ಬೆಳೆಯುವ ಉದ್ದೇಶದಿಂದ ಜನರು ಅವರ ವಿಚಾರಧಾರೆ ತಮ್ಮ ಮನದಲ್ಲಿರಿಸಿಕೊಳ್ಳುವುದಲ್ಲದೇ ಮುಂದಿನ ಯುವ ಪೀಳಿಗಿಗೆ ತಿಳಿಸುವ ಕೆಲಸವಾದಾಗ ಮಾತ್ರ ಸಾರ್ಥಕತೆ ಕಂಡುಕೊಳ್ಳುತ್ತದೆ. ನಾರಾಯಣ ಗುರುಗಳು ಶೋಷಿತ ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾನ್ ಮಾನವತಾವಾಗಿಯಾಗಿದ್ದು, ಸಮಾಜ ಪರಿವರ್ತನೆ ಮೂಲಕ ಮೌನಕ್ರಾಂತಿ ತಂದರು ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿದರು. ಶಂಕರನಾರಾಯಣ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಪಂಜು ಬಿಲ್ಲವ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿ.ಎನ್.ಬಿಲ್ಲವ ಅವರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್ ರಾಮಚಂದ್ರಪ್ಪ, ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್, ಎಸ್.ರಾಜು ಪೂಜಾರಿ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಮೋಹನ್ ಪೂಜಾರಿ, ಎಸ್.ಮದನಕುಮಾರ ಸುರೇಶ ಬಟ್ವಾಡಿ, ಮಹೇಂದ್ರ ಪೂಜಾರಿ, ಶೇಖರ ಪೂಜಾರಿ, ಗಣೇಶ ಎಲ್.ಪೂಜಾರಿ, ಶೇಖರ ಪೂಜಾರಿ, ವಾಸು ಪೂಜಾರಿ, ಶಿವರಾಜ ಪೂಜಾರಿ ಗೋಳಿಹೊಳೆ, ದೊಟ್ಟಯ್ಯ ಪೂಜಾರಿ, ಅರವಿಂದ ಪೂಜಾರಿ ಇದ್ದರು. ಬಿಇಒ ನಾಗೇಶ್ ಕೆ.ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಗಣೇಶ ಪೂಜಾರಿ, ಮಂಜುನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಪ್ರೀತಿ, ವಿಶ್ವಾಸ, ಮನುಷ್ಯತ್ವದ ಸದೃಢ ವಿಚಾರಗಳಿಂದ ಬಲಿಷ್ಠ ರಾಷ್ಟ್ರ ನಿರ್ಮಿಸಲು ಎಲ್ಲರನ್ನು ಒಟ್ಟುಗೂಡಿಸಲು ಸಾಧ್ಯವಿದೆ. ಮನುಷ್ಯ ಸದೃಢನಾಗುವುದು ಶ್ರೀಮಂತಿಕೆ, ಪರಂಪರೆಯಿಂದಲ್ಲ. ನೈತಿಕತೆ ತುಂಬಿದ ಚಾರಿತ್ರೃ, ಜ್ಞಾನದಿಂದ ಮಾತ್ರ. ಹೀಗಾಗಿ ಮನುಷ್ಯ ಮೊದಲು ಜ್ಞಾನವಂತರಾಗಬೇಕು ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ, ಅವರ ತತ್ವಾದರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿದೆ. ಪ್ರಸ್ತುತ ಕಾಲಘಟ್ಟಕ್ಕೆ ಅವರ ಚಿಂತನೆ ಹೇಳಿ ಮಾಡಿಸಿದಂತಿದೆ. ಕೆ.ಗೋಪಾಲ ಪೂಜಾರಿ, ಮಾಜಿ ಶಾಸಕ https://www.vijayavani.net/narayana-guru-is-the-guru-of-the-human-race https://www.vijayavani.net/following-the-ideals-of-narayana-guru

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net