

ವಿಜಯಪುರ: ದತ್ತಿ ಉಪನ್ಯಾಸಗಳಿಂದ ಮಕ್ಕಳಲ್ಲಿ ಜ್ಞಾನ ವೃದ್ಧಿಯಾಗಲಿದೆ ಎಂದು ಕೋಲಾರ ಪಟ್ಟಣದ ಹಿರಿಯ ಸಾಹಿತಿ ಬೊರಮ್ಮ ಪತಂಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಬಲೇಶ್ವರ ತಾಲೂಕಿನ ಕಾರಜೋಳದ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಬಲೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ, ಅನಿಲ ದೇಸಾಯಿ, ಶಂಕರಲಿಂಗಪ್ಪ ದೊಡ್ಡಪ್ಪ ಮಾಧನಶೆಟ್ಟಿ ಹಾಗೂ ಬಂಥನಾಳ ಸಂಗನಬಸವ ಸ್ವಾಮೀಜಿ ಸ್ಮರಣೆ ಗುರುವಾರ ನಡೆದ ದತ್ತಿ ಉಪನ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು.
ದತ್ತಿ ಉಪನ್ಯಾಸ ಅತ್ಯಂತ ಉಪಯುಕ್ತವಾಗಿದೆ. ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳಬೇಕು. ಅದರಲ್ಲೂ ಮಕ್ಕಳ ಸಾಹಿತ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದ್ದು, ಇದರ ಸದುಪಯೋಗವಾಗಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಕಲಗುರ್ಕಿಯ ದಯಾನಂದ ಹೀರೆಮಠ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲೂ ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳು ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ವಿಜಯಪುರ ಜಿಒಸಿಸಿ ಬ್ಯಾಂಕ್ ನಿರ್ದೇಶಕಿ ನೀಲಾ ಇಂಗಳೆ ಆಕಾಶವಾಣಿ ಹಾಗೂ ರಂಗಭೂಮಿ ಕಲಾವಿದರ ಮಹತ್ವ ಕುರಿತು ಮಾತನಾಡಿದರು.
ನ್ಯಾಯವಾದಿ ಮಹಮ್ಮದ ಗೌಸ್ ಹವಾಲ್ದಾರ್ ಬಂಥನಾಳದ ಸಂಗನಬಸವ ಸ್ವಾಮೀಜಿಯವರ ಶೈಕ್ಷಣಿಕ ಕೊಡುಗೆ ಕುರಿತು ಉಪನ್ಯಾಸ ನೀಢಿದರು.
ಕಾರಜೋಳ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಎಂ.ಎಚ್. ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕು ಕಸಾಪ ಅಧ್ಯಕ್ಷ ಅಶೋಕ ಆಸಂಗಿ ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ, ಕೃಷ್ಣಾನಂದ ಭೀರಗೊಂಡ, ಸದಾಶಿವ ಮಮದಾಪೂರ, ಚಂದ್ರಶೇಖರ ಹಂಚನಾಳ, ದಾನಮ್ಮ ಪಾಟೀಲ, ಶ್ರೀಮಂತ ದನ್ಯಾಳ, ಸುವರ್ಣಾ ಪತ್ತಾರ, ಪ್ರಶಾಂತ ಶಿಂದೆ, ಹಣಮಂತರಾಯ ಪಾಟೀಲ, ಕವಿತಾ ಹೂಗಾರ, ಮುಜೀಬ ಜಹಾಗೀರದಾರ, ಸಬಲಬಿ ಮುಜಾವರ, ಹೀನಾಕೌಸರ ಕಡಕೋಳ, ಮುಸ್ತಪಾ ಬೇಪಾರಿ, ಶರಣವ್ವಾ ಅರಳಗುಂಡಗಿ, ಚಂದ್ರಕಲಾ ಅರಳದಿನ್ನಿ, ಚಂದ್ರಶೇಖರ ಸಿನ್ನೂರ, ಅನೀಲ ಯಳಮೇಲಿ ಉಪಸ್ಥಿತರಿದ್ದರು.