

ಬೇಲೂರು: ಕರಾಟೆ ಕಲಿಯುವುದರಿಂದ ಆತ್ಮರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಜ್ಞಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಪಟ್ಟಣದ ಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್ ಕರಾಟೆ ಡೂ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಕರಾಟೆ ವಿದ್ಯಾರ್ಥಿಗಳಿಗೆ ಭಾನುವಾರ ವಿವಿಧ ಬೆಲ್ಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ರಕ್ಷಣೆಗೆ ಈ ಕಲೆ ಪೂರಕ. ಇದನ್ನು ಕಲಿಯುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬಹುದು ಎಂದರು.
ವೈದ್ಯ ಡಾ.ಚಂದ್ರಮೌಳಿ ಮಾತನಾಡಿದರು. ಕರಾಟೆ ತರಬೇತುದಾರರಾದ ನಾಗೇಂದ್ರಬಾಬು, ನಂದೀಶ್, ಕೃಪಾ, ವ್ಯವಸ್ಥಾಪಕ ಗಣೇಶ್, ಎಪಿಎಂಸಿ ಸದಸ್ಯ ಜಗದೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗೇಶ್ ಇದ್ದರು.