ಇಂಗ್ಲಿಷ್‌ ಶಿಕ್ಷಕರನ್ನು ನೇಮಿಸುವಂತೆ ಮಕ್ಕಳ ಪ್ರತಿಭಟನೆ

Childrens-meet-dc-Prabhuling-Kavalikatti
Published on

ಕಾರವಾರ: ಕಾಯಂ ಇಂಗ್ಲಿಷ್‌ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ಇಲ್ಲಿನ ಬಜಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಪಾಲಕರು ಪ್ರತಿಭಟನೆ ನಡೆಸಿದರು.

ಕುಂಠಿ ಮಹಾಮ್ಮಾಯಿ ದೇವಸ್ಥಾನ ಸಮೀಪದ ಶಾಲೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಶಿಕ್ಷಕರನ್ನು ನೀಡುವಂತೆ ಒತ್ತಾಯಿಸಿದರು. ನಂತರ ಜಿಲ್ಲಾಧೊಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಮಾಡಿದರು.

ಶಾಲೆಯಲ್ಲಿ 1ರಿಂದ 5ನೇ ತರಗತಿ ಇಂಗ್ಲೀಷ್ ಮಾಧ್ಯಮವಿದ್ದು, ತರಗತಿಗೆ ಒಬ್ಬ ಇಂಗ್ಲೀಷ್ ಮಾಧ್ಯಮದ ಶಿಕ್ಷಕರನ್ನು ನೀಡಬೇಕಿದೆ. 6 ಮತ್ತು 7ನೇ ತರಗತಿಗೆ ಇಂಗ್ಲಿಷ್ ಮಾಧ್ಯಮದ ಪದವೀಧರ ಶಿಕ್ಷಕರನ್ನೇ ನೇಮಕ ಮಾಡಬೇಕು. ಮುಖ್ಯ ಶಿಕ್ಷಕಿ ಐರಿನ್ ರೋಡ್ರಿಗಸ್ ಅವರನ್ನು ವರ್ಗಾಯಿಸಬಾರದು.

ಹೆಚ್ಚುವರಿ ಹೆಸರಲ್ಲಿ ವರ್ಗಾವಣೆ ಮಾಡಲಾದ ಮರಲೀನ್ ರೋಜಾರಿಯೋ ಹಾಗೂ ಗೀತಾ ಹೆಬ್ಬಾರ್ ಅವರನ್ನು ಮರಳಿ ಶಾಲೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಪರಿಸ್ಥಿತಿಯಲ್ಲಿ ಬಜಾರ್ ಶಾಲೆಗೆ ಪಾಲಕರು ತಮ್ಮ ಮಕ್ಕಳನ್ನು ಕಳಿಸಲು ಮುಗಿಬೀಳುತ್ತಿದ್ದಾರೆ.

ಬಿಇಎಲ್ ಶಿಕ್ಷಣ ಸಂಸ್ಥೆ ಶಾಲೆಗೆ ನೂತನ ಕಟ್ಟಡ ನಿರ್ಮಿಸಿಕೊಟ್ಟಿದೆ. ಆದರೆ, ಶಿಕ್ಷಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ ಎಂದರು.

ಕಳೆದ ಐದು ವರ್ಷಗಳಿಂದ ಶಿಕ್ಷಕರ ಕೊರತೆ ಇದ್ದು, ಜಿಲ್ಲಾಡಳಿತ, ಜಿಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು. ರಚಿತಾ ಕುಡಾಳಕರ್ ಎಂಬ ಬಾಲಕಿ ತಮ್ಮ ಸಮಸ್ಯೆಯನ್ನು ಜಿಲ್ಲಾಧಿಕಾರಿ ಅವರಿಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net