

ಕೋಟ: ಹೆಸಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ವರ್ಷದಿಂದ ಆರಂಭಗೊಂಡ ಆಂಗ್ಲಮಾಧ್ಯಮ ವಿಭಾಗವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ ಶೆಟ್ಟಿ ಕೆ.ಎನ್. ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ ಕುಲಾಲ ಅಧ್ಯಕ್ಷತೆ ವಹಿಸಿದ್ದರು.
ಕೊರ್ಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಲ್ಲವಿ ಕುಲಾಲ, ರಾಘವೇಂದ್ರ ಶೆಟ್ಟಿ, ಗಣೇಶ ಪ್ರಸಾದ ಕಾಂಚನ್, ಪ್ರಮುಖರಾದ ಶಂಕರ ಶೆಟ್ಟಿ ಕೆ.ಎನ್, ರೋಶನಿ ಪೂಂಜ, ವೈಭವ ಶೆಟ್ಟಿ, ಉದಯ ಭಂಡಾರಿ, ಜಯಲಕ್ಷ್ಮೀ ಬಿ., ಸಂಜೀವ ಎಂ., ವಿಜಯಾ ಆರ್., ವಿಜಯ ಶೆಟ್ಟಿ, ಸ್ವಾತಿ ಬಿ., ಪವಿತ್ರಾ, ಮಧುರಾ, ಎಸ್‌ಡಿಎಂಸಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು. ಶೇಖರಕುಮಾರ್ ಸ್ವಾಗತಿಸಿದರು. ರವೀಂದ್ರ ನಾಯಕ್ ವಂದಿಸಿದರು. ಅಶೋಕ ತೆಕ್ಕಟ್ಟೆ ನಿರೂಪಿಸಿದರು