ಸರ್ಕಾರಿ 12 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭ

16 MBL 1
Published on

ಮುಳಬಾಗಿಲು: ತಾಲೂಕಿನ 12 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್​ಕೆಜಿ ಮತ್ತು ಯುಕೆಜಿ ತರಗತಿಗಳು ಪ್ರಾರಂಭವಾಗುತ್ತಿರುವುದು ಶ್ಲಾಘನೀಯ. ಪಾಲಕರು ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ದಾಖಲಿಸಿ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ತಹಸೀಲ್ದಾರ್​ ವಿ.ಗೀತಾ ಹೇಳಿದರು.

ನಗರದ ಡಿವಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಎಲ್​ಕೆಜಿ ಮತ್ತು ಯುಕೆಜಿ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸಲು ಆರ್ಥಿಕ ಅಷ್ಟೆನೂ ಉತ್ತಮವಾಗಿರುವುದಿಲ್ಲ. ಅಂತಹವರು ತಾಲೂಕಿನ ಆಯ್ದ 12 ಸರ್ಕಾರಿ ಶಾಲೆಗಳಲ್ಲಿ ಎಲ್​ಕೆಜಿ ಮತ್ತು ಯುಕೆಜಿಗೆ ದಾಖಲಾತಿ ಮಾಡಲು ಅವಕಾಶ ಇದೆ ಎಂದರು.

ಡಿವಿಜಿ ಅವರ ಹೆಸರಿನ ಮಹಿಮೆ ಪರಿಣಾಮ ಓಸಾಟ್​ ಸಂಸ್ಥೆ ಅವರ ಲಕ್ಷಾಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಕಟ್ಟಿಕೊಟ್ಟಿದ್ದಾರೆ. ಜತೆಗೆ ಶಾಲೆಗೆ ಮೊದಲಿನಿಂದಲೂ ದಾಖಲಾತಿಮಟ್ಟ ಏರಿಕೆಯಲ್ಲೇ ಇರುವುದು ಒಂದು ಹೆಗ್ಗಳಿಕೆಯಾಗಿದೆ. ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂದರೆ ಅತಿಶಯೋಕ್ತಿ ಆಗುವುದಿಲ್ಲ, ಜತೆಗೆ ಸ್ಥಳಿಯ ಸಮುದಾಯದ ಸಹಕಾರ, ಶಿಕ್ಷಕರ ಕಾರ್ಯ ನಿರ್ವಹಣೆಯು ಇನ್ನು ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂದರು.

ಬಿಇಒ ಕೆ.ಎನ್​.ರಾಮಚಂದ್ರಪ್ಪ ಮಾತನಾಡಿ, ತಾಲೂಕಿನಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳವಾಗುತ್ತಿದೆ. ಪ್ರಥಮ ಹಂತದಲ್ಲಿ ನಗರ ಪ್ರದೇಶಗಳಲ್ಲಿ ಉತ್ತಮ ವಾತಾವರಣ ಕಂಡುಬರುತ್ತದೆ. ಕ್ರಮೆಣ ಗ್ರಾಮೀಣ ಪ್ರದೇಶಗಳಲ್ಲೂ ಈ ಬಗ್ಗೆ ಒತ್ತು ನೀಡಿ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದರ ಮೂಲಕ ಆ ಗ್ರಾಮಗಳ ಶಾಲೆಗಳಲ್ಲೇ ಮಕ್ಕಳು ದಾಖಲಾಗುವಂತ ವಾತಾವರಣ ನಿಮಾರ್ಣ ಮಾಡಿಸುವ ಕೆಲಸವನ್ನು ಮಾಡಿಸಲಾಗುತ್ತಿದೆ ಎಂದರು.

ಗೌರವಾಧ್ಯಕ್ಷ ಅಪ್ಪಿಕೊಂಡೇನಹಳ್ಳಿ ಚಂದ್ರಶೇಖರ್​, ಉಪಾಧ್ಯಕ್ಷ ಕೆ.ಆರ್​.ಶಿವರಾಜು, ಶಾಲೆಯ ಮುಖ್ಯಶಿಕ್ಷಕ ಸೊಣ್ಣಪ್ಪ, ಶಿಕ್ಷಕರಾದ ಆರ್​.ಶಾರದಾ, ಆರ್​.ಭಾರತಿ, ಎಂ.ಮಂಜುಳಾ, ಭಾಗ್ಯಶ್ರೀ, ಸಲ್ಮಾ, ಕವಿತಾ, ಎಸ್​.ಎನ್​.ಭಾಗ್ಯಾ, ಅರುಣಾ ಕುಮಾರಿ, ದೀಪಾ, ನಂದಿನಿ, ಎಸ್​ಡಿಎಂಸಿ ಸದಸ್ಯರಾದ ರಾಧಮ್ಮ, ಮಂಜುಳಮ್ಮ, ಲಕ್ಷಿ$್ಮ, ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net