ಎಲ್‌ಕೆಜಿಯಲ್ಲಿ ಆಂಗ್ಲ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಸಹಕಾರಿ: ಸವಿತಾ ಕೀರ್ತನ್

lkg
Published on

ಮಡಿಕೇರಿ: ಆಂಗ್ಲ ಭಾಷೆ ಶಿಕ್ಷಣವನ್ನು ಅಂಗನವಾಡಿಯಲ್ಲಿ ಎಲ್‌ಕೆಜಿ ಮೂಲಕ ಬಡ ಮಕ್ಕಳಿಗೆ ಒದಗಿಸುವುದರಿಂದ ಮಕ್ಕಳ ಭವಿಷ್ಯ ಮತ್ತಷ್ಟು ಉತ್ತಮ ಪಡಿಸಲು ಸಹಕಾರಿ ಆಗುತ್ತದೆ ಎಂದು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಹೇಳಿದರು.

ಚೆಟ್ಟಿಮಾನಿ ಅಂಗನವಾಡಿಯಲ್ಲಿ ಬುಧವಾರ ನಡೆದ ಎಲ್‌ಕೆಜಿ ಪ್ರಾರಂಭೋತ್ಸವ ಕಾರ್ಯಕ್ರಮ, ಸಿಂಗತೂರು ಅಂಗನವಾಡಿ ಕಾರ್ಯಕರ್ತೆ ರಾಧ, ನವೋದಯ ಅಂಗನವಾಡಿ ಸಹಾಯಕಿ ಜಾನಕಿ, ಕೊಚ್ಚಿ ಅಂಗನವಾಡಿ ಸಹಾಯಕಿ ರೋಸಮ್ಮ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು.

ಎಲ್‌ಕೆಜಿಯನ್ನು ಅಂಗನವಾಡಿಯಲ್ಲಿ ಪ್ರಾರಂಭಿಸುತ್ತಿರುವುದು ಇಲಾಖೆ ಅತ್ಯುತ್ತಮ ಯೋಜನೆಯಲ್ಲಿ ಒಂದಾಗಿದೆ. ಆಂಗ್ಲ ಭಾಷೆ ಶಿಕ್ಷಣವನ್ನು ಅಂಗನವಾಡಿಯಲ್ಲಿ ಎಲ್‌ಕೆಜಿ ಮೂಲಕ ಬಡ ಮಕ್ಕಳಿಗೆ ಒದಗಿಸುವುದರಿಂದ ಮಕ್ಕಳ ಭವಿಷ್ಯ ಮತ್ತಷ್ಟು ಉತ್ತಮ ಪಡಿಸಲು ಸಹಕಾರಿ ಆಗುತ್ತದೆ ಎಂದರು.

ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ ಹಲವಾರು ಬೇಡಿಕೆಗಳ ಅನುಗುಣವಾಗಿ ಮಕ್ಕಳಿಗೆ ಸಮವಸ್ತ್ರ, ಚೇರ್, ಸ್ವೆಟರ್ ಮತ್ತು ಕ್ಯಾಪ್, ಚೇರ್ ಮತ್ತು ಆಟಿಕೆಗಳನ್ನು ದಾನಿಗಳಿಂದ ಕೊಡುಗೆಯಾಗಿ ಪಡೆಯಲಾಗಿದೆ. ಮಾದರಿ ಎಲ್‌ಕೆಜಿ ಕೇಂದ್ರವನ್ನಾಗಿ ಚೆಟ್ಟಿಮಾನಿ ಅಂಗನವಾಡಿಯನ್ನು ಪರಿವರ್ತಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಸುಶೀ, ಯೋಗಿತಾ ಶ್ರಮಿಸಿದ್ದಾರೆ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮಿ ಮಾತನಾಡಿ, ಅಂಗನವಾಡಿ ಪ್ರಾರಂಭವಾಗಿ ೫೦ ವರ್ಷ ತುಂಬಿದ ಸವಿ ನೆನಪಿಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಪ್ರಾರಂಭವಾಗುತ್ತಿದೆ. ಮಡಿಕೇರಿ ತಾಲೂಕಿಗೆ ೧೦ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಪ್ರಥಮ ಹಂತದಲ್ಲಿ ಪ್ರಾರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಹ್ಯಾರಿಸ್ ಮಾತನಾಡಿ, ಯಾವುದೇ ಯೋಜನೆಗಳನ್ನು ಇಲಾಖೆ ತಂದರು ನಮ್ಮ ಗ್ರಾಮ ಪಂಚಾಯತಿಯ ಅಂಗನವಾಡಿ ಕಾರ್ಯಕರ್ತೆಯರು ಬಹಳ ಶಿಸ್ತಿನಿಂದ ಯೋಜನೆಯ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಈ ಹೊಸ ಆಲೋಚನೆಗೆ ಗ್ರಾಮ ಪಂಚಾಯತಿಯ ಮತ್ತು ವೈಯಕ್ತಿಕ ಸಹಕಾರ ಸದಾ ಇರುವುದಾಗಿ ತಿಳಿಸಿದರು.

ಗ್ರಾಮ್ ಪಂಚಾಯಿತಿ ಅಧ್ಯಕ್ಷ ದಿನೇಶ್ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಹೆಚ್ಚುವರಿ ಕೊಠಡಿಗೆ ಸಲ್ಲಿಸಿದ್ದ ಬೇಡಿಕೆಯನ್ನು ನೆರವೇರಿಸಲಾಗುವುದು. ಮಾದರಿ ಎಲ್‌ಕೆಜಿ ಕೇಂದ್ರವಾಗಿ ಚೆಟ್ಟಿಮಾನಿ ಕೇಂದ್ರವನ್ನು ಮಾರ್ಪಾಡಲಿಸಲು ಗ್ರಾಮ ಪಂಚಾಯತಿ ವತಿಯಿಂದ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷ ಹೇಮಲತಾ, ಭಾಗಮಂಡಲ ವೃತ್ತದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಹಾಜರಿದ್ದರು. ಅಂಗನವಾಡಿ ಸಹಾಯಕಿ ವಾಸಂತಿ ಪ್ರಾರ್ಥಿಸಿದರೆ, ಕೋಡಿಮಟ್ಟೆ ಅಂಗನವಾಡಿ ಕಾರ್ಯಕರ್ತೆ ಮಾಲತಿ ನಿರೂಪಿಸಿದರು. ಚೆಟ್ಟಿಮಾನಿ ಅಂಗನವಾಡಿ ಕಾರ್ಯಕರ್ತೆ ಸುಶಿ ಸ್ವಾಗತಿಸಿದರೆ, ಪದಕಲ್ಲು ಅಂಗನವಾಡಿ ಕಾರ್ಯಕರ್ತೆ ಯೋಗಿತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net