ಇಂಗ್ಲೀಷ್ ಸಂವಹನ ಕೌಶಲ ಅಳವಡಿಸಿಕೊಳ್ಳಿ: ಪ್ರಭಾರ ಪ್ರಾಚಾರ್ಯ ಡಾ.ಜೆ.ಕೃಷ್ಣ ಸಲಹೆ

kmp
ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷಾ ಸಂವಹನ ಕೌಶಲ ಮಾಹಿತಿಯನ್ನು ತರಬೇತುದಾರ ಇಮ್ರನ್ ಚೋಪ್ದಾರ್ ನೀಡಿದರು. ಪ್ರಾಧ್ಯಾಪಕ ರಾಜ್ಮಾ.ಟಿ.ಎಂ.ಆರ್, ಮತ್ತು ವಿದ್ಯಾರ್ಥಿಗಳು ಇದ್ದರು.
Published on

ಕಂಪ್ಲಿ: ಭವಿಷ್ಯದಲ್ಲಿ ಉನ್ನತ ಹುದ್ದೆಗಳಿಸಲು ಅಗತ್ಯವಿರುವ ಇಂಗ್ಲೀಷ್ ಸಂವಹನ ಕೌಶಲ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಪ್ರಭಾರ ಪ್ರಾಚಾರ್ಯ ಡಾ.ಜೆ.ಕೃಷ್ಣ ಹೇಳಿದರು.


ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದಡಿ, ಪ್ಲೇಸ್‌ಮೆಂಟ್ ಸೆಲ್ ಮತ್ತು ವಿಜಯಪುರದ ಎಫ್ 2 ಇಂಗ್ಲೀಷ್ ಕ್ಲಾಸ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಇಂಗ್ಲೀಷ್ ಭಾಷಾ ಸಂವಹನ ಕೌಶಲ ಕುರಿತು ಉಪನ್ಯಾಸ ನೀಡಿದರು. ಇಂಗ್ಲೀಷ್ ಭಾಷೆಯನ್ನು ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಹೆಚ್ಚು ಬಳಸಲಾಗುತ್ತಿದೆ. ಭಾಷಾ ಸಂವಹನ ಕೌಶಲ ಮಾಹಿತಿಯನ್ನು ಅರಿಯುವುದು ಅಗತ್ಯವಿದ್ದು, ವಿದ್ಯಾರ್ಥಿಗಳು ಈ ಕೌಶಲದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.


ತರಬೇತುದಾರ ಇಮ್ರಾನ್ ಚೋಪ್ದಾರ್ ಮಾತನಾಡಿ, ಪ್ರತಿ ದಿನ 1 ಗಂಟೆಯಂತೆ 30 ದಿನಗಳವರೆಗೆ ಆನ್‌ಲೈನ್ ಮೂಲಕ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್‌ನ್ನು ಟೀಚ್ ಮೆಂಟ್ ಆ್ಯಪ್ ಮೂಲಕ ತರಬೇತಿ ನೀಡಲಾಗುವುದು ಎಂದರು. ಪ್ರಾಧ್ಯಾಪಕರಾದ ರಾಜ್ಮಾ.ಟಿ.ಎಂ.ಆರ್, ಡಾ.ಕೆ.ಮಹೇಶ, ಗ್ರಂಥಪಾಲಕ ಎ.ಜಿ.ವೀರಭದ್ರಪ್ಪ, ಜಿ.ಎಂ.ಮಮತಾ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net