ದೇಶದ ಪ್ರಗತಿಗೆ ಇಂಜಿನಿಯರ್​ಪಾತ್ರ ಹಿರಿದು

15 Jaggu 8
Published on

ಬೆಳಗಾವಿ: ದೇಶದ ಪ್ರಗತಿಗೆ ಕಾರಣವಾಗಿರುವ ತಂತ್ರಾನದ ಬೆಳವಣಿಗೆಯಲ್ಲಿ ಇಂಜಿನಿಯರ್​ಗಳ ಪಾತ್ರ ಅಪಾರವಾಗಿದೆ ಎಂದು ನಾಗನೂರು ರುದ್ರಾ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಶಿವಬಸವ ನಗರದ ಎಸ್​.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬದುಕಿನಲ್ಲಿ ಹಣವಿದ್ದರೆ ಮಾತ್ರ ಸಾಲದು. ಒಳ್ಳೆಯ ವ್ಯಕ್ತಿತ್ವ ಇದ್ದರಷ್ಟೇ ಸಮಾಜ ನಮ್ಮನ್ನು ಆದರದಿಂದ ಗೌರವಿಸುತ್ತದೆ. ಇಂಜಿನಿಯರಿಂಗ್​ ಪದವಿ ಜನಸೇವೆಗಾಗಿ ಮೀಸಲಿಡಬೇಕೇ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ. ಓರ್ವ ಯಶಸ್ವಿ ಇಂಜಿನಿಯರ್​ ಆಗುವುದಕ್ಕಿಂತ ಸಮಾಜಸೇವೆ ಮಾಡುವ ಒಳ್ಳೆಯ ನಾಗರಿಕರಾಗಬೇಕು ಎಂದು ಕಿವಿಮಾತು ಹೇಳಿದರು.

ಗೋಕುಲ್​ ಫೆರೋಕಾಸ್ಟ್​ ಪೆವೇಟ್​ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ನಿತಿನ್​ ಲಾಂಡ್ಗೆ ಮಾತನಾಡಿ, ವೃತ್ತಿಪರ ಜೀವನದಲ್ಲಿ ಧೈರ್ಯ, ನವೋತ್ಪಾದನೆ ಮತ್ತು ನೈತಿಕತೆಯಿಂದ ಕಾರ್ಯನಿರ್ವಹಿಸಿದರೆ ಯಾರು ಬೇಕಾದರೂ ಯಶಸ್ವಿ ಇಂಜಿನಿಯರ್​ ಆಗಲು ಸಾಧ್ಯ ಎಂದರು.

ಎಸ್​ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್ಮನ್​ ಡಾ.ಎಫ್​.ವಿ. ಮಾನ್ವಿ ಅಧ್ಯತೆ ವಹಿಸಿದ್ದರು. ಉದ್ಯಮಿ ವಿಲಾಸ ಬಾದಾಮಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್​.ಪಟಗುಂದಿ ಸ್ವಾಗತಿಸಿದರು. ಅಕಾಡೆಮಿಕ್​ ಡೀನ್​ ಡಾ. ಅಶೋಕ ಹುಲಗಬಾಳಿ ವರದಿ ಓದಿದರು. ಡಾ.ಯಾಸ್ಮೀನ್​ ಶೇಖ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net