ಗುಣಮಟ್ಟ, ಕಾರ್ಯಕ್ಷಮತೆಗೆ ಮಾನ್ಯತೆ

Published on

ಭಗವಾನ್​ ದಾಸ್​ ಕೆ. ಅಭಿಮತ | ಇಂಜಿನಿಯರ್ಸ್​ ಡೇ ಸಮಾರಂಭ

ವಿಜಯವಾಣಿ ಸುದ್ದಿಜಾಲ ಉಡುಪಿ
ಇಂಜಿನಿಯರಿಂಗ್​ ಸಹಿತ ಎಲ್ಲ ಕ್ಷೇತ್ರಗಳಲ್ಲೂ ಇಂದು ಸವಾಲುಗಳಿದ್ದು, ಗುಣಮಟ್ಟದ ಕೆಲಸದ ಜತೆಗೆ ಕಾರ್ಯಕ್ಷಮತೆಗಷ್ಟೇ ಮಾನ್ಯತೆಯಿದೆ. 4ಡಿ, 5ಡಿ ತಂತ್ರಜ್ಞಾನಕ್ಕೆ ಅನುಗುಣವಾಗಿ ಕಠಿಣ ಪರಿಶ್ರಮದ ಮೂಲಕ ಮೇಲ್ದರ್ಜೆಗೆ ಏರಬೇಕು ಎಂದು ಉಡುಪಿಯ ಎಸಿಇ ಟೆಕ್ನೋಕ್ರಾಟ್ಸ್​ ಪ್ರೈ. ಲಿ. ನಿರ್ದೇಶಕ, ಇಂಜಿನಿಯರ್​ ಭಗವಾನ್​ ದಾಸ್​ ಕೆ. ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ಬ್ರಹ್ಮಗಿರಿಯಲ್ಲಿ ಎಜಿ ಅಸೋಸಿಯೇಟ್ಸ್​ ವತಿಯಿಂದ ಶನಿವಾರ ಆಯೋಜಿಸಿದ್ದ ಇಂಜಿನಿಯರ್ಸ್​ ಡೇ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

UDP-15-1-Engineer
ಉಡುಪಿಯಲ್ಲಿ ಎಜಿ ಅಸೋಸಿಯೇಟ್ಸ್​ ಆಯೋಜಿಸಿದ್ದ ಇಂಜಿನಿಯರ್ಸ್​ ಡೇ ಕಾರ್ಯಕ್ರಮದಲ್ಲಿ ಎಂ.ರಾಘವೇಂದ್ರ ಸೋಮಯಾಜಿ ದಂಪತಿಯನ್ನು ಸನ್ಮಾನಿಸಲಾಯಿತು. ಭಗವಾನ್​ ದಾಸ್​ ಕೆ., ಪ್ರೊ. ಡಾ. ಕಿರಣ ಕಾಮತ್​, ಯೋಗೀಶ್​ ಚಂದ್ರ ಧರ ಇದ್ದರು.

ಎಲ್ಲರಿಗೆ ಮಾದರಿ

ಮಣಿಪಾಲ ಎಂಐಟಿ ಸಿವಿಲ್​ ಇಂಜಿನಿಯರಿಂಗ್​ ವಿಭಾಗದ ಪ್ರೊ. ಡಾ. ಕಿರಣ ಕಾಮತ್​ ಮಾತನಾಡಿ, ಸರ್​ ಎಂ. ವಿಶ್ವೇಶ್ವರಯ್ಯ ಅವರ ನೈತಿಕತೆ ಹಾಗೂ ಮೌಲ್ಯಗಳು ಎಲ್ಲ ಇಂಜಿನಿಯರ್ಸ್​ಗಳಿಗೂ ಮಾದರಿ ಎಂದರು.

ಕೆಲಸದಲ್ಲಿ ತನ್ಮಯತೆ

ಮನೋಹರ ಯಡಿಯಾಳ್​ ಅವರು ಸರ್​ ಎಂ. ವಿಶ್ವೇಶ್ವರಯ್ಯ ಅವರ ಕುರಿತು ಮಾತನಾಡಿ, ಎಲ್ಲ ಯುವ ಇಂಜಿನಿಯರ್​ಗಳು ಕೆಲಸದಲ್ಲಿ ತನ್ಮಯತೆ ಅಳವಡಿಸಿಕೊಳ್ಳಬೇಕು ಎಂದರು.

ಎಜಿ ಅಸೋಸಿಯೇಟ್ಸ್​ನ ಪಾಲುದಾರ ಯೋಗೀಶ್​ ಚಂದ್ರ ಧರ ಉಪಸ್ಥಿತರಿದ್ದರು. ಎಜಿ ಅಸೋಸಿಯೇಟ್ಸ್​ನ ಪಾಲುದಾರ ಎಂ. ಗೋಪಾಲ ಭಟ್​ ಸ್ವಾಗತಿಸಿದರು. ಅಕ್ಷತಾ ಪ್ರಾರ್ಥಿಸಿದರು. ಮಹೇಶ ಹಲ್ಸನಾಡು ಕಾರ್ಯಕ್ರಮ ನಿರೂಪಿಸಿದರು.

ಮಾಡುವ ಕಾರ್ಯದಲ್ಲಿರಲಿ ಶ್ರದ್ಧೆ

ಕುಂದಾಪುರದ ವೆಂಕಟಲಲಕ್ಷ್ಮೀ ಬಿಲ್ಡರ್ಸ್​ ಪ್ರಾಜೆಕ್ಟ್​ನ ಇಂಜಿನಿಯರ್​ ಎಂ.ರಾಘವೇಂದ್ರ ಸೋಮಯಾಜಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾವು ಮಾಡುವ ಯಾವುದೇ ಕೆಲಸ, ಕಾರ್ಯದಲ್ಲಿ ಶ್ರದ್ಧೆಯಿಂದ ತೊಡಗಿಕೊಳ್ಳಬೇಕು. ಅದರಿಂದ ಸಂತೋಷ, ನೆಮ್ಮದಿ ಲಭಿಸುತ್ತದೆ. ಸರ್​ ಎಂ.ವಿಶ್ವೇಶ್ವರಯ್ಯ ಅವರು ಇಂಜಿನಿಯರ್​ ಆಗಿ, ಆಡಳಿತಾತ್ಮಕವಾಗಿ ಹೇಗೆ ಮತ್ತು ಯಾವ ರೀತಿ ಕೆಲಸ ಮಾಡಿದ್ದಾರೆ ಎನ್ನುವುದನ್ನು ಓದಿ ತಿಳಿದುಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net