ಅಭಿವೃದ್ಧಿಯಲ್ಲಿ ಇಂಜಿನಿಯರ್ ಕೊಡುಗೆ ಅಪಾರ

16 HBD 01
ಹುಮನಾಬಾದ್‌ನಲ್ಲಿ ಭಾನುವಾರ ನಡೆದ ಇಂಜಿನಿಯರ್ ದಿನಾಚರಣೆಯಲ್ಲಿ ಕಾರ್ಮಿಕರನ್ನು ಸನ್ಮಾನಿಸಲಾಯಿತು. ರಾಜಕುಮಾರ ಕಲಬುರ್ಗಿ, ಸಿ.ಕೆ.ಪಾಟೀಲ್, ಸುಭಾಷ ಗಂಗಾ, ಶಿವಾನಂದ ಮಂಠಾಳಕರ್, ವಿಜಯಕುಮಾರ ರುದ್ರನೂರ ಇತರರಿದ್ದರು.
Published on

ಹುಮನಾಬಾದ್: ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ ಎಂದು ಬೆಂಗಳೂರಿನ ಕೆಆರ್‌ಐಡಿಎಲ್ ಎಇಇ ರಾಜಕುಮಾರ ಕಲಬುರ್ಗಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ತಾಲೂಕು ಇಂಜಿನಿಯರ್ ಅಸೋಸಿಯೇಷನ್ ಆಯೋಜಿಸಿದ್ದ ಇಂಜಿನಿಯರ್ ದಿನಾಚರಣೆಯಲ್ಲಿ ಮಾತನಾಡಿ, ವೃತ್ತಿ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಇಂಜಿನಿಯರ್ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ಪಾಟೀಲ್ ಮಾತನಾಡಿ, ಇಂಜಿನಿಯರ್‌ಗಳು ಸರ್ ಎಂ.ವಿಶ್ವೇಶರಯ್ಯ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ವೃತ್ತಿ ಘನತೆ ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಉಪಾಧ್ಯಕ್ಷ ಸುಭಾಷ ಗಂಗಾ, ಕಾರ್ಯದರ್ಶಿ ಶಿವಾನಂದ ಮಂಠಾಳಕರ್, ಸದಸ್ಯ ಅಬ್ದುಲ್ ನದೀಮ್ ಮಾತನಾಡಿ, ವಿಶ್ವೇಶ್ವರಯ್ಯ ಕರ್ತವ್ಯನಿಷ್ಠೆ ಎತ್ತಿ ಹಿಡಿದ ಮಹಾನ್ ವ್ಯಕ್ತಿ. ದೇಶದಲ್ಲಿ ಅವರ ಕಾರ್ಯವೈಖರಿ ಇಂದಿಗೂ ಮಾದರಿಯಾಗಿದೆ ಎಂದರು.

ಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜ ಮಾಳಗೆ ಮಾತನಾಡಿದರು. ಉತ್ತಮ ಕಾರ್ಮಿಕರು ಹಾಗೂ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ನೀಡಿ ಸನ್ಮಾನ ಮಾಡಲಾಯಿತು.

ಇಂಜಿನಿಯರ್‌ಗಳಾದ ಸೈಯದ್ ಖಾಜಾ, ವಿಜಯಕುಮಾರ ರುದ್ರನೂರ, ರಾಜು ಜಾಜಿ, ಅಬ್ದುಲ್ ಬಾರಿ, ಸಂಗಮೇಶ ಪಾಟೀಲ್, ವಿನಾಯಕ ರಘೋಜಿ, ರಾಘವೇಂದ್ರ ವಿಭೂತಿ, ಲಿಂಗರಾಜ ತುಪ್ಪದ ಇತರರಿದ್ದರು. ವಿನೋದ ಭೀಮಶೆಟ್ಟಿ ಸ್ವಾಗತಿಸಿದರು. ಗಣಪತಿ ಸಂಗಮ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ತೆರೆದ ವಾಹನದಲ್ಲಿ ಸರ್ ಎಂ.ವಿಶ್ವೇಶರಯ್ಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net