ಘೋಣಸಗಿಯಲ್ಲಿ ಅಭಿಯಂತರರ ದಿನಾಚರಣೆ

tikota15-1
ತಿಕೋಟಾ ತಾಲೂಕಿನ ಘೋಣಸಗಿಯಲ್ಲಿ ಹಮ್ಮಿಕೊಂಡಿದ್ದ ಅಭಿಯಂತರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆ ಮಕ್ಕಳಿಗೆ ಕ್ರೀಡಾ ಸಾಮಗ್ರಿ, ವಿಜ್ಞಾನ ಪ್ರಯೋಗಾಲಯದ ವಸ್ತುಗಳನ್ನು ನೀಡಲಾಯಿತು. ಘಟಕದ ಜಿಲ್ಲಾಧ್ಯಕ್ಷ ಪೃಥ್ವರಾಜ ಪಾಟೀಲ ಇತರರಿದ್ದರು.
Published on

ತಿಕೋಟಾ: ಸಮೀಪದ ಘೋಣಸಗಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯಲ್ಲಿ ಕರ್ನಾಟಕ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ ಜಿಲ್ಲಾ ಘಟಕದಿಂದ ಅಭಿಯಂತರ ದಿನ ಆಚರಿಸಲಾಯಿತು.

ಘಟಕದ ಜಿಲ್ಲಾಧ್ಯಕ್ಷ ಪೃಥ್ವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಕಾರಾಜನಗಿ ಮಾತನಾಡಿದರು.

ಸಂಘದ ಕಾರ್ಯದರ್ಶಿ ಪರಮೇಶ ಮಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ಶಾಲೆ ಮಕ್ಕಳಿಗೆ ಕ್ರೀಡಾ ಸಾಮಗ್ರಿ, ವಿಜ್ಞಾನ ಪ್ರಯೋಗಾಲಯದ ವಸ್ತುಗಳನ್ನು ವಿತರಿಸಲಾಯಿತು.

ಮಹೇಶ ದೊಡಮನಿ, ರಾಜಕುಮಾರ ದೊಡಮನಿ, ಪೈಗಂಬರ ಜತ್ತಿ, ರಮೇಶ ಭಜಂತ್ರಿ, ಅಮಸಿದ್ದ ಮಾಳಿ, ಸಿದ್ದಪ್ಪ ಮುಚ್ಚಂಡಿ, ದುಂಡಪ್ಪ ಬಂಡಿವಡ್ಡರ, ಪರಮೇಶ್ವರ ಗದ್ಯಾಳ, ಸಂಜೀವಕುಮಾರ ಬಿರಾದಾರ, ಪರಶುರಾಮ ಶಹಾಪುರ, ಕಲ್ಲಪ್ಪ ನಂದರಗಿ, ಎಸ್.ಎಸ್.ಕವಿ ಇತರರಿದ್ದರು. ಶಾಲೆ ಮಕ್ಕಳು ಪ್ರಾರ್ಥಿಸಿದರು. ಎಸ್.ಆರ್.ಹಿರೇಮಠ ಸ್ವಾಗತಿಸಿದರು. ಕಲ್ಲಪ್ಪ ನಂದರಗಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net