

ಕೆ.ಆರ್.ಸಾಗರ: ಕಾವೇರಿ ನೀರಾವರಿ ನಿಗಮದಲ್ಲಿ ಭಾನುವಾರ ಇಂಜಿನಿಯರ್ಸ್ ಡೇ ಆಚರಿಸಲಾಯಿತು.
ಕೃಷ್ಣರಾಜಸಾಗರ ಅಣೆಕಟ್ಟೆಯ ಮುಖ್ಯದ್ವಾರದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆೆ ಮಾಡಲಾಯಿತು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ್ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ಅವರು ದೂರದೃಷ್ಟಿಯುಳ್ಳವರಾಗಿದ್ದರು. ಅವರು ಎಂದೂ ಸ್ವಾರ್ಥಕ್ಕೆ ಕೆಲಸ ಮಾಡಿದವರಲ್ಲ, ದೇಶದ ಅಭಿವೃದ್ಧಿಯ ಸಲುವಾಗಿ ದೇಶದ ವಿವಿಧೆಡೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದು, ಅದರ ಫಲವಾಗಿ ಇಂದು ವಿಶ್ವ ವಿಖ್ಯಾತ ಕೆ.ಆರ್.ಸಾಗರ ಅಣೆಕಟ್ಟೆ ಸೇರಿದಂತೆ ಹಲವು ಅಣೆಕಟ್ಟೆಗಳು, ಬ್ಯಾಂಕ್‌ಗಳು, ಅನೇಕ ಕಾರ್ಖಾನೆಗಳು ನಿರ್ಮಾಣವಾಗಿವೆ. ಅವರು ದೇಶಕ್ಕೆ ಸಲ್ಲಿಸಿದ ಅಮೋಘ ಕೊಡುಗೆಯ ಫಲವಾಗಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.
ಕೆ.ಆರ್.ಸಾಗರ ಅಣೆಕಟ್ಟೆ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಾರೂಕ್ ಅಬು, ಗೇಜಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಿಶೋರ್ ಕುಮಾರ್ ಸರ್.ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್‌ಗಳಾದ ಪುನೀತ್, ಅಭಿಲಾಷ್, ವೇಣುಗೋಪಾಲ, ಅಕೀಬ್ ಜಾವಿದ್, ಗಣೇಶ್, ಕೆ.ಆರ್.ಸಾಗರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಶಿವಪ್ಪ, ಖಜಾಂಚಿ ನಾಗೇಶ್, ಜಯಪ್ರಕಾಶ್, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಅಣೆಕಟ್ಟೆ ಉಸ್ತುವಾರಿ ಅಧಿಕಾರಿ ಪ್ರತಾಪ್ ಹಾಗೂ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳು, ಸಿಬ್ಬಂದಿ ಹಾಜರಿದ್ದರು.