ನಿಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಇಂಜಿನಿಯರ್ಸ್ ದಿನಾಚರಣೆ

blm (3)
Published on

ಕಾರ್ಕಳ: ಸವಾಜದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಮಹತ್ವದ್ದು. ಇಂಜಿನಿಯರ್‌ಗಳ ಸೃಜನಶೀಲತೆ ಹಾಗೂ ತಾಂತ್ರಿಕ ಪರಿಣತಿ ದೇಶದ ಪ್ರಗತಿಯ ಪ್ರಮುಖ ಶಕ್ತಿ ಎಂದು ನೊವಿಗೊ ಸೊಲ್ಯೂಷನ್ಸ್ ಸಂಸ್ಥೆ ಸಹ ಸಂಸ್ಥಾಪಕ ಪ್ರವೀಣ್‌ಕುಮಾರ್ ಕಲ್ಬಾವಿ ಹೇಳಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನ ಹಾಗೂ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್‌ಕ್ಯಾಂಪಸ್ ಸೆಂಟರ್‌ನ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ.ಎ.ಯೋಗೀಶ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಿಎಚ್.ಡಿ ಪದವಿ ಪಡೆದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಶಿಕ್ಷಕರಾದ ಡಾ.ಚಿನ್ಮಯಿ ಶೆಟ್ಟಿ, ಡಾ.ಪುನೀತ್ ಆರ್.ಪಿ, ಡಾ.ಮಮತಾ ಕೆ.ಎಂ, ಡಾ.ಪ್ರೀತಿ ಸಾಲಿಯನ್ ಕೆ., ಡಾ.ಪ್ರವೀಣ್ ಎಂ.ನಾಯಕ್, ಡಾ.ದೇವಿದಾಸ್, ಡಾ.ಧನಂಜಯ ಬಿ., ಡಾ.ಅನಂತ ಮೂರ್ತಿ, ಡಾ.ಮಿನು ಪಿ.ಅಬ್ರಹಾಂ, ಡಾ.ನಿಜು ರಾಜನ್, ಡಾ.ರಶ್ಮಿ ನವೀನ್, ಡಾ.ಅಶ್ವಿನ್ ಶೆಣೈ ಆರ್., ಡಾ.ಸುದೇಶ್ ರಾವ್, ಡಾ.ಅಶ್ವಿನಿ ಕೆ., ಡಾ.ಪ್ರವೀಣಾಕುವಾರಿ ಎಂ.ಕೆ. ಹಾಗೂ ಡಾ.ಸುನು ರೋಸ್ ಜೋಸೆಫ್ ಅವರನ್ನು ಸನ್ಮಾನಿಸಲಾಯಿತು.

ನಿಟ್ಟೆ ತಾಂತ್ರಿಕ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ಸಂತೋಷ್‌ಕುವಾರ್ ತಿವಾರಿ ಅವರನ್ನು ಗೌರವಿಸಲಾಯಿತು. ಡಾ.ಶಿವಪ್ರಸಾದ್ ಶೆಟ್ಟಿ, ಡಾ.ವಾಸುದೇವ, ಉಪಪ್ರಾಂಶುಪಾಲ ಡಾ.ನಾಗೇಶ್ ಪ್ರಭು, ಡಾ.ನರಸಿಂಹ ಬೈಲ್ಕೇರಿ, ಡಾ.ಶ್ರೀವಿದ್ಯಾ ಜಿ. ಹಾಗೂ ಡಾ.ಪದ್ಮಾವತಿ ಇದ್ದರು.

ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ಸ್ವಾಗತಿಸಿದರು, ಡಾ.ಐ.ಆರ್.ಮಿತ್ತಂತಾಯ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಭರತ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net