

ಬಸವಕಲ್ಯಾಣ: ದೇಶ ಕಟ್ಟುವಲ್ಲಿ, ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವಲ್ಲಿ ಇಂಜಿನಿರ‍್ಸ್ ಪಾತ್ರ ದೊಡ್ಡದು ಎಂದು ಕಲಬುರಗಿ ಪಾಲಿಕೆ ಅಧಿಕಾರಿ ಸಾವಿತ್ರಿ ಸಲಗರ ಹೇಳಿದರು.
ನಗರದ ವರ್ಷಾ ಫಂಕ್ಷನ್ ಹಾಲ್‌ನಲ್ಲಿ ಅಸೋಶಿಯೇಷನ್ ಆಫ್ ಸಿವಿಲ್ ಇಂಜಿನಿರ‍್ಸ್(ಬಿಎಸಿಇ)ನಿಂದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನದ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ೫೬ನೇ ಇಂಜಿನಿರ‍್ಸ್ ದಿನಾಚರಣೆಯನ್ನು ಉದ್ಘಾಟಿಸಿದ ಮಾತನಾಡಿ, ದೇಶ ಕಂಡ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಕನ್ನಡಿಗರು ಎನ್ನುವುದು ನಮ್ಮ ಹೆಮ್ಮೆ. ಅವರ ಸಾಧನೆ, ಕೊಡುಗೆ, ಬದುಕು ಸ್ಫೂರ್ತಿದಾಯಕ ಎಂದು ಬಣ್ಣಿಸಿದರು.
ಇಂಜಿನಿರ‍್ಸ್ ಮತ್ತು ಡಾಕ್ಟರ್ ಸಮಾಜದ ಕಣ್ಣುಗಳಿದ್ದಂತೆ. ಕಾರ್ಮಿಕರು ಇಂಜಿನಿಯ್ಸ್ ಕೈ-ಕಾಲು ಇದ್ದಂತೆ. ಅವರನ್ನು ಕೇಂದ್ರೀಕರಿಸಿ ಇಂಜಿನಿರ‍್ಸ್ ದಿನ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಎಇಇ ಗೋಪಿಕೃಷ್ಣ, ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ಟೆಕ್ನಾಲಾಜಿ ಪಾತ್ರ ಅಮೋಘ. ಹೊಸ ತಂತ್ರಜ್ಞಾನ ಸದುಪಯೋಗ ಪಡೆದು, ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವುದು ಮುಖ್ಯ ಎಂದರು.
ಭಾಲ್ಕಿಯ ಎಇಇ ಅಲ್ತಾಫ್ ಮಾತನಾಡಿ, ಯಾವುದೇ ನಿರ್ಮಾಣದಲ್ಲಿ ಸ್ಪಷ್ಟ ಯೋಜನೆ, ಅನುಷ್ಠಾನದಲ್ಲಿ ಬದ್ಧತೆ, ಸೂಕ್ತ ನಿರ್ವಹಣೆ ಅವಶ್ಯ ಎಂದರು.
ಬಿಎಸಿಇ ಅಧ್ಯಕ್ಷ ಬಸವರಾಜ ಮುಸ್ತಾಪೂರೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಶ್ರೀಶೈಲ ವಾತಡೆ ಸ್ವಾಗತಿಸಿದರು. ನಾಗರಾಜ ಪಾಟೀಲ್ ವಂದಿಸಿದರು. ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ನಿರೂಪಣೆ ಮಾಡಿದರು.
ಶಿವಕುಮಾರ ಪಾಟೀಲ್, ಉಪಾಧ್ಯಕ್ಷ ರಮಾಕಾಂತ ದುಬೆ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಉಳ್ಳೆ, ಖಜಾಂಚಿ ಆಕಾಶ ಬನಗುಂಡಿ, ಸದಸ್ಯರಾದ ಉಮೇಶ ಶೀಲವಂತ, ಚನ್ನಬಸವ ಪಾಟೀಲ್, ಮನೋಜಗಿರಿ, ಪುರುಷೋತ್ತಮ ಜಾಧವ್, ಸಚಿನ ಶಾಶೆಟ್ಟೆ, ಧನಂಜಯ ಕಾಡಾದಿ, ಬಸವರಾಜ ಗುಂಗೆ, ವಿನೋದ ಪರ್ಮಾ, ಕಿರಣ ಹರಸೂರೆ, ಮುಕ್ತಾ ಟ್ರೇರ‍್ಸ್ನ ನಾಗನಾಥ ಮುಕ್ತಾ, ನಕ್ಷ ಗೌರೆ ಟ್ರೇರ‍್ಸ್ನ ನವೀನಕುಮಾರ ಗೌರೆ, ಸಾಯಿಬಾಬಾ ಸ್ಟೀಲ್‌ನ ಬಸವರಾಜ ಮುರಡೆ, ಕುಂಬಾರೆ ಟ್ರೇರ‍್ಸ್ ಮಾಲಿಕ ವಾಸು, ಮಾಮು ಟ್ರೇರ‍್ಸ್ ಜುಹೇಬ ಮಾಮು, ಭವಾನಿ ಟ್ರೇರ‍್ಸ್ ಶಾಲಿವಾನ ಜೋತೆಪ್ಪ ಇತರರಿದ್ದರು.