ಕೆಸಿಸಿಐನಲ್ಲಿ ಇಂಜಿನಿಯರ್ಸ್ ದಿನಾಚರಣೆ

Screenshot_20230914-204756_1.jpg
Published on

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಜನ್ಮ ವಾಷಿರ್ಕೋತ್ಸವ ಅಂಗವಾಗಿ ಸೆ. 15ರಂದು ಸಂಜೆ 5ಕ್ಕೆ ಇಂಜಿನಿಯರ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಡೀನ್ ಪ್ರೊ. ಬಿ.ಎಲ್. ದೇಸಾಯಿ ಅತಿಥಿಗಳಾಗಿ ಭಾಗವಹಿಸುವರು. ಅವರು ಭವಿಷ್ಯದಲ್ಲಿ ಯುವ ಉದ್ದಿಮೆಗಳಿಗೆ ಪ್ರೋತ್ಸಾಹ, ಪ್ರೇರಣೆ, ಮಾರ್ಗದರ್ಶನ ಮತ್ತು ಅವಕಾಶಗಳ ಕುರಿತು ಮಾತನಾಡುವರು.

ದೇಶಪಾಂಡೆ ಸ್ಟಾರ್ಟ್ ಅಪ್ ಸಿಇಒ ಕಾರ್ತಿಕ ಶಂಕರನ್ ಅವರು ಯಶಸ್ವಿ ಉದ್ಯಮಿಗಳು ಕುರಿತು ಮಾತನಾಡಲಿದ್ದಾರೆ.

ಉತ್ತರ ಕರ್ನಾಟಕದ ಸಾಧಕರಾದ ಪ್ರೊ. ಬಿ.ಎಲ್. ದೇಸಾಯಿ, ಗುರುರಾಜ ವಾಸನ್, ವಿಶ್ವಮೂತಿರ್ ಕೆ.ಎಂ., ನಳಿನಿ ಮಹಾಗಾಂವಕರ, ಬಿ. ಮಹೇಶ್, ಶ್ರೀಧರ ಉಪ್ಪಿನ್, ನಾರಾಯಣ ತೋಸೂರು,
ಪ್ರಶಾಂತಾ ಡಿ. ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net