ನಗರದ ಬೆಳವಣಿಗೆಯಲ್ಲಿ ಸಿವಿಲ್ ಇಂಜಿನಿಯರ್ ಗಳ ಪಾತ್ರ ಮಹತ್ವದ್ದು

Civil engineers program
Published on

ಕಾರವಾರ: ಒಂದು ನಗರದ ಬೆಳವಣಿಗೆಯಲ್ಲಿ ಸಿವಿಲ್ ಇಂಜಿನಿಯರ್ ಗಳ ಪಾತ್ರ ಬಹುಮುಖ್ಯವಾದದ್ದು ಎಂದು ನಗರ ಹಾಗೂ ಗ್ರಾಮಾಂತರ ಯೋಜನಾ ಇಲಾಖೆಯ ಎಡಿ ನೋಫಲ್ ಅಹ್ಮದ್ ಹೇಳಿದರು.
ನಗರದ ಕೆಎಚ್ ಬಿ ಕಾಲನಿಯ ದಿ.ಇಂಜಿನಿಯರ್ಸ್ ಕಾರ್ನರ್ ನ ನಿರ್ಮಾಣ ಸಭಾ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ
ಕಾರವಾರ ಸಿವಿಲ್ ಸಲಹಾ ಅಭಿಯಂತರ ಸಂಘದ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.
ನಗರಗಳ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿ ವಲಯ‌ ನಿಯಮಾವಳಿಗಳನ್ನು ನಗರಾಭಿವೃದ್ದಿ ಪ್ರಾಧಿಕಾರವು ಪ್ರತಿ ದಶಕಕ್ಕೊಮ್ಮೆ ಅಭಿವೃದ್ಧಿಪಡಿಸುತ್ತದೆ.
ಸಿವಿಲ್ ಸಲಹಾ ಅಭಿಯಂತರರು ತಮ್ಮ ಅನುಭವಗಳನ್ನು ನಗರಾಭಿವೃದ್ದಿ ಪ್ರಾಧಿಕಾರದೊಂದಿಗೆ ಹಂಚಿಕೊಂಡು ನಿಯಮಾವಳಿಗಳ ಬದಲಾವಣೆಯಲ್ಲಿ ಯೋಗ್ಯ ಸಲಹೆ ನೀಡಲು ಅವಕಾಶವಿದೆ ಎಂದರು.
ಉದ್ಯಮಿ ಮಂಗಲದಾಸ ಕಾಮತ್ ಮಾತನಾಡಿ, ಸಂಘದ ಸದಸ್ಯರು ತಾಂತ್ರಿಕ ವಿಷಯದ ಕುರಿತು ತಮ್ಮ ಜ್ಞಾನವನ್ನು ವಿಸ್ತರಿಸುತ್ತಾ ಸಾಗಬೇಕು ಎಂದರು. ಸಂಘವು ಸಮಾಜದ ಸಮಸ್ಯೆಗಳ ಕುರಿತು ಸ್ಪಂದಿಸುವ ಮಾದರಿ ಸಂಸ್ಥೆಯಾಗಿದೆ ಎಂದರು.

ಈ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಗಿರೀಶ್ ದೇಸಾಯಿ, ಮಾತನಾಡಿ,ಸಂಘವು ವೃತ್ತಿಪರ ಜ್ಞಾನದ ಜತೆಯಲ್ಲಿ, ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ. ನಗರದ ಸಮಸ್ಯೆಗಳ ಕುರಿತು ಹೋರಾಟದಲ್ಲಿ ತನ್ನ ಬದ್ಧತೆಯನ್ನು ತೋರಿಸುತ್ತಿದೆ.
ಆರಾಧ್ಯ ತೆಂಡುಲ್ಕರ್ ಹಾಗೂ ಆರವ ತೆಂಡುಲ್ಕರ್ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಪ್ರಿತಮ್ ಮಾಸೂರಕರ್ ಸ್ವಾಗತಿಸಿದರು. ನಿರ್ಗಮಿತ ಕಾರ್ಯದರ್ಶಿ ಲಕ್ಷ್ಮೀಕಾಂತ ತೆಂಡುಲ್ಕರ್ ವರದಿ ವಾಚನ ಮಾಡಿದರು. ವಿನೋದ ಸಾಕಳೇಕರ್‌, ಮೆಹಬೂಬ್ ಸೈಯ್ಯದ್ ಅತಿಥಿಗಳನ್ನು ಪರಿಚಯಿಸಿದರು.
ಧಾರವಾಡದಲ್ಲಿ ನಡೆದ ಇಂಜಿನಿಯರ್ಸ್ ಗಳ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂಜಯ್ ನಾಯ್ಕ ನೇತೃತ್ವದ ಉಪ-ವಿಜೇತ ತಂಡವನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.ರೋಶನ್ ರೇವಣಕರ ಹಾಗೂ ರಾಘವೇಂದ್ರ ಪ್ರಭು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net