

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಆಲಂಗಾರಿನಲ್ಲಿ ಭಾನುವಾರ ಬೆಳಗ್ಗೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಡುಬಿದಿರೆ ಎಸ್‌ಎನ್‌ಎಂ ಪಾಲಿಟೆಕ್ನಿಕ್‌ನ ಮೆಕಾನಿಕಲ್ ವಿಭಾಗ ಮುಖ್ಯಸ್ಥ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾತ್ವಿಕ್ ಭಂಡಾರಿ(21) ಆತ್ಮಹತ್ಯೆ ಮಾಡಿಕೊಂವರು. ಭಾನುವಾರ ಬೆಳಗ್ಗೆ ಸಾತ್ವಿಕ್‌ನನ್ನು ತಾಯಿ ಎಬ್ಬಿಸುವಾಗ ಕೋಪಗೊಂಡಿದ್ದು, ಕೆಲ ನಿಮಿಷಗಳ ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.