ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸೃಜನಶಿಲತೆ ತೋರ್ಪಡಿಸುವ ನಾವಿನ್ಯ ಪ್ರೊಜೆಕ್ಟಗಳ ಪ್ರದರ್ಶನ ಕಾರ್ಯಕ್ರಮ "ಕೆಎಲ್ಇಐಟಿ ಟೆಕಿ ಶೋ' ಶನಿವಾರ ನಡೆಯಿತು.
ಸ್ವಯಂ ಚಾಲಿತ ಪಿವಿ ಪ್ಯಾನಲ್ ಕ್ಲೀನರ್, ವಿದ್ಯುತ್ ಮಿನಿ ಇನ್ವರ್ಟರ್, ಸ್ಮಾರ್ಟ್ ಎನರ್ಜಿ ಮೀಟರ್, ಕಸದಿಂದ ವಿದ್ಯುತ್ ಉತ್ಪಾದನೆ, ಜೀರೊ ವೇಸ್ಟ್ ಮ್ಯಾನೇಜಮೆಂಟ್ ಮುಂತಾದ ಪ್ರೊಜೆಕ್ಟ್ ಗಳನ್ನು ಪ್ರದಶಿರ್ಸಲಾಯಿತು.
ಆಧುನಿಕ ತಾಂತ್ರಿಕತೆ ಒಳಗೊಂಡ ಸಮಾಜಕ್ಕೆ ಅಗತ್ಯವಾದ ಹಲವು ಯೋಜನೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ತ್ರಿ ಎಕ್ಸಿಸ್ ಇಂಜಿನಿಯರಿಂಗ್ ಸವಿರ್ಸಸನ ನಿರ್ದೇಶಕ ಪ್ರೇಮಾನಂದ ದುಂದೂರ, ಕ್ರಿನ್ಸನ್ ಟೆಕ್ನಾಲಜಿಸ್ ಸಂಸ್ಥಾಪಕ ಮಂಜುನಾಥ ಹಿರೇಮಠ, ಕೆಎಲ್ಇ ಪ್ರೇರಣಾ ವಸತಿಯುತ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಶ್ರೀನಿವಾಸ ಲಿಕಿ ಇತರರು ವಿದ್ಯಾಥಿರ್ಗಳು ಮಾಡಿದ ಪ್ರಯೋಗಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರೊಜೆಕ್ಟ್ ಗಳನ್ನು ವೀಕ್ಷಣೆ ಮಾಡಿದರು.
ಪ್ರಾಚಾರ್ಯ ಡಾ. ಮನು ಟಿ.ಎಂ. ಮಾತನಾಡಿ, ಪ್ರಯೋಗಗಳ ಮೂಲಕ ಕಲಿಯುವುದು ಬಹಳ ಪರಿಣಾಮಕಾರಿಯಾಗಿರುತ್ತದೆ. ಇಂದಿನ ಶೈಕ್ಷಣಿಕ ವಾತಾವರಣದಲ್ಲಿ ನಿತ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆಧ್ಯತೆ ಆಗಬೇಕು ಎಂದರು.
ಉತ್ತಮ ಪ್ರೊಜೆಕ್ಟ್ ಮಾಡಿದವರಿಗೆ ನಗದು ಬಹುಮಾನ ನೀಡಲಾಯಿತು.
ಡೀನ್ ಡಾ. ಏರಿಸ್ವಾಮಿ ಟಿ., ಡಾ. ಶ್ರೀಧರ ಮಠದ, ಡಾ. ಗಂಗಾಧರ ಬಾಗೆಹಳ್ಳಿ, ಡಾ. ಅನಿತಾ ಎನ್, ಡಾ. ವೀರೇಶ ಕರಿಕಟ್ಟಿ, ಇತರರು ಇದ್ದರು.