ಇಂಜಿನಿಯರಿAಗ್ ಪದವಿ: ಬೀದಿ ಬದಿ ವ್ಯಾಪಾರಿಯ ಪುತ್ರನಿಗೆ ೩ನೇ ರ‍್ಯಾಂಕ್

1 HPT 3A pavan kumar raju
Published on

ಹೊಸಪೇಟೆ: ಹಂಪಿಯ ಬಿದಿ ಬದಿ ವ್ಯಾಪಾರಿಯ ಮಗ ಎ.ಪವನ್ ಕುಮಾರ್ ರಾಜು ಮೆಕಾನಿಕಲ್ ಇಂಜಿನಿಯರಿAಗ್‌ನಲ್ಲಿ ೩ನೇ ರ‍್ಯಾಂಕ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ೨೩ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪವನ್ ಕುಮಾರ್ ರಾಜುಗೆ ಪದವಿ ಪ್ರದಾನ ಮಾಡಲಾಯಿತು.

ಹೊಸಪೇಟೆಯ ವೀರಶೈವ ವಿದ್ಯಾವರ್ಧಕ ಸಂಘದ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿಯಾಗಿದ್ದು, ೨೦೨೨-೨೩ ಶೈಕ್ಷಣಿಕ ಸಾಲಿನ ಇಂಜಿನಿಯರಿAಗ್ ಪರೀಕ್ಷೆಗಳಲ್ಲಿ ಒಟ್ಟು ೯.೪೬ ಸಿ.ಜಿ.ಪಿ.ಎ. ಅಂಕ ಪಡೆದಿದ್ದಾರೆ. ಪವನ್ ಕುಮಾರ್ ರಾಜು ಸದ್ಯ ಹೊಸಪೇಟೆ ತಾಲೂಕಿನ ಬಿಎಂಎA ಇಸ್ಪಾತ್ ಲಿಮಿಟೆಡ್ ಕಂಪನಿಯಲ್ಲಿ ಅಭಿಯAತರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರ ತಂದೆ ಎ. ನರಸರಾಜು, ತಾಯಿ ಎ.ಪದ್ಮಾವತಿ ಅವರು ಇಂದಿಗೂ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ತುಂಭದ್ರ ನದಿ ದಂಡೆಯಲ್ಲಿ ಚಹ ಅಂಗಡಿ ನಡೆಸುತ್ತಿದ್ದಾರೆ. ಮಗನ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net