ನಿಮಿರ್ತಿ ಕೇಂದ್ರದ ಇಂಜಿನಿಯರ್​ ಆತ್ಮಹತ್ಯೆ

03GDG14
Published on

ಗದಗ: ನಿಮಿರ್ತಿ ಕೇಂದ್ರದ ಇಂಜಿನಿಯರ್​ ಶಂಕರಗೌಡ ಪಾಟೀಲ (54) ಶುಕ್ರವಾರ ಬೆಳಗ್ಗೆ ನಗರದ ಪಲ್ಲವಿ ಹೊಟೆಲ್​ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ನಿಮಿರ್ತಿ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಇಂಜಿನಿಯರ್​ ಆಗಿ ಕೆಲ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಶುಕ್ರವಾರ ಬೆಳಗ್ಗೆ ವಾಯು ವಿಹಾರಕ್ಕೆಂದು ಮನೆಯಿಂದ ತೆರಳಿದ್ದಾರೆ. ಬೆಳಗ್ಗೆ ಪಲ್ಲವಿ ಹೊಟೆಲ್​ ನಲ್ಲಿ ರೂಂ ಪಡೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕೌಟಂಬಿಕ ಕಲಹ, ಹಣದ ವ್ಯವಹಾರ, ಸಾಲ ಭಾದೆ ಎಂದು ಅನುಮಾನಗಳು ಮೂಡುತ್ತಿದ್ದು, ಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net