ಲಯನ್ಸ್ ಕ್ಲಬ್‌ನಿಂದ ಇಂಜಿನಿಯರ್‌ಗೆ ಸನ್ಮಾನ

GAN (6)
Published on

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ಇಂಜಿನಿಯರ್ಸ್ ಡೇ ಆಚರಿಸಲಾಯಿತು. ಕುಂದಾಪುರದ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ ಅವರನ್ನು ಲಯನ್ಸ್ ಕ್ಲಬ್ ಸದಸ್ಯ ಹಳ್ನಾಡು ಬಿ.ಜಯರಾಮ ಶೆಟ್ಟಿ ಸನ್ಮಾನಿಸಿದರು.

ಕುಂದಾಪುರ ಕೋಸ್ಟಲ್ ಅಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ವಸಂತರಾಜ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಅಶೋಕ ಶೆಟ್ಟಿ ಸಂಸಾಡಿ, ಉದ್ಯಮಿ ನೆಲಗೊಂಡ ಸುಧಾಕರ ಶೆಟ್ಟಿ ಜನ್ಸಾಲೆ, ಶಶಿಧರ ಶೆಟ್ಟಿ ಸಾಲ್ಗದ್ದೆ, ಡಾ.ಪ್ರಶಾಂತ್ ಶೆಟ್ಟಿ, ಉದಯ್ ಶೆಟ್ಟಿ ಮಚ್ಚಟ್ಟು, ಪ್ರಕಾಶ ಶೆಟ್ಟಿ ಚೋರ್ಮಕ್ಕಿ, ಗಣೇಶ್ ಬೈಂದೂರು, ಪ್ರತಿಷ್ ಶೆಟ್ಟಿ ಕೊಕ್ಕರ್ಣೆ, ವಿಕ್ರಂ ಶೆಟ್ಟಿ ಕುಂದಾಪುರ, ಪ್ರಭಾಕರ ಶೆಟ್ಟಿ ಬೆಳ್ವೆ, ಪ್ರಶಾಂತ್ ಶೆಟ್ಟಿ ಶಿರೂರು, ರಾಜೀವ ಶೆಟ್ಟಿ ಹೆಂಗವಳ್ಳಿ, ಸುಕುಮಾರ ಶೆಟ್ಟಿ ಹೇರಿಕುದ್ರು, ಅರುಣ್ ಕುಮಾರ್ ಶೆಟ್ಟಿ ಕುಂದಾಪುರ, ಸತೀಶ್ ಶೆಟ್ಟಿ ಹೆಸ್ಕತ್ತೂರು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಕಂದಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭುಜಂಗ ಶೆಟ್ಟಿ ವಂದಿಸಿದರು. ಡಾ.ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net