ಕಟ್ಟಡ ಸಾಮಗ್ರಿ ವಸ್ತುಗಳ ಪ್ರದರ್ಶನ

19GDG03
Published on

ಜಿಲ್ಲಾ ಸಿವಿಲ್ ಇಂಜಿನಿಯರಿಂಗ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜ.21 ರಿಂದ ಮೂರು ದಿನಗಳ ಕಾಲ ಕಟ್ಟಡ ಸಾಮಗ್ರಿ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹಿರಿಯ ಇಂಜಿನಿಯರ್ ಎಂ.ಸಿ. ಐಲಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು 1991ರಲ್ಲಿ ಸಂಸ್ಥೆ ಅಸ್ತಿತ್ವ ಬಂದಿತು. 2001 ರಿಂದಲೂ ಪ್ರತಿ ಎರಡು ವರ್ಷಕ್ಕೊಮ್ಮೆ ವಸ್ತು ಪ್ರದರ್ಶನ ನಡೆಸುತ್ತ ಬರಲಾಗಿದೆ. ಜ.20 ರಂದು ಬೆಳಗ್ಗೆ 10 ಗಂಟೆಗೆ ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜರಗಲಿದೆ. ತೋಂಟದ ಸಿದ್ದರಾಮ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು.  ಶಾಸಕ ಎಸ್.ವಿ. ಸಂಕನೂರ ಅತಿಥಿಗಳಾಗಿ ಭಾಗವಹಿಸುವವರು. ಮನೆ, ಇತರೆ ಕಟ್ಟಡ ನಿರ್ಮಿಸುವ ಆಸಕ್ತಿಯನ್ನು ಎಲ್ಲರೂ ಹೊಂದಿರುತ್ತಾರೆ. ಆಸಕ್ತ ಜನರು  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ರೀತಿಯ ನೋಂದಣಿ ಫೀ ಇರುವುದಿಲ್ಲ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಸವರಾಜ ಮಲ್ಲನ್ನವರ, ಎಂ.ಪಿ. ಪಾಟೀಲ, ಆರ್.ಜೆ. ಭಾಂಡಗೆ, ವಿ.ಎಚ್. ಡಂಬಲ್, ಎಸ್.ಡಿ. ಪಾಟೀಲ, ಎಸ್.ಎಂ. ಅಂಗಡಿ, ಶಂಕರ್ ಬಾಕಳೆ, ಎ.ಪಿ. ಕೋಟಿಗೌಡರ, ಬಿ.ಬಿ. ಅಂಗಡಿ, ಕೆ.ವಿ. ಪಾಟೀಲ, ಐ.ಪಿ. ಸಮಗಂಡಿ, ಜಯರಾಜ ಮುಳಗುಂದ, ಎಸ್.ಎಸ್. ಚವಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net