ಬೈಕ್​​ಗೆ ನೀರಿನ ಟ್ಯಾಂಕರ್ ಡಿಕ್ಕಿ; ಇಂಜಿನಿಯರ್​ ಸ್ಥಳದಲ್ಲೇ ಸಾವು

accident
Published on

ಬೆಂಗಳೂರು: ವೈಟ್​ಫೀಲ್ಡ್​ನ ಕುಂದಲಹಳ್ಳಿ ರಸ್ತೆಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ನೀರಿನ ಟ್ಯಾಂಕರ್​ಗೆ ಬಲಿಯಾಗಿದ್ದಾನೆ.

ಇಂದಿರಾನಗರ ನಿವಾಸಿ ಟೆಕ್ಕಿ ಶ್ರೇಯಸ್ ಆಚಾರ್ಯ (26) ಮೃತ ಯುವಕ. ಭಾನುವಾರ (ಫೆ.16) ಬೆಳಗ್ಗೆ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ಮಾರತ್ತಹಳ್ಳಿಯಿಂದ ವೈಟ್​ಫೀಲ್ಡ್ ಕಡೆಗೆ ಕುಂದಲಹಳ್ಳಿಯ ಏಕಮುಖ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

ಗಂಭೀರವಾಗಿ ಗಾಯಗೊಂಡ ಶ್ರೇಯಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತ ಎಸಗಿದ ಬಳಿಕ ಟ್ಯಾಂಕರ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ವೈಟ್​ಫೀಲ್ಡ್ ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net