ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡ್ತಿದ್ದ ಇಂಜಿನಿಯರ್​ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

death
Published on

ಉಳ್ಳಾಲ: ಸೋಮೇಶ್ವರ ಪುರಸಭಾ ಕಚೇರಿ ಸಮೀಪದ ನಿವಾಸಿ ಗಣೇಶ್ ಪ್ರಸನ್ನ ಎಂಬುವರ ಪುತ್ರ ಪವನ್ ಭಟ್(30) ಬುಧವಾರ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ ಊರಿಗೆ ಬಂದಿದ್ದ ಪವನ್ ಪ್ರತಿದಿನ ಸೋಮೇಶ್ವರ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದರು. ಎಂದಿನಂತೆ ಬುಧವಾರ ಸಾಯಂಕಾಲ 4.30ರ ಹೊತ್ತಿಗೆ ಬಂದಿದ್ದು, ಸಮುದ್ರ ಕಿನಾರೆಯಲ್ಲಿರುವ ರುದ್ರಪಾದೆ ಏರಿ ಏಕಾಏಕಿ ಸಮುದ್ರಕ್ಕೆ ಜಿಗಿದಿದ್ದಾರೆ.

ಜೀವ ರಕ್ಷಕರು ರಕ್ಷಿಸಲು ಯತ್ನಿಸಿದರೂ ರುದ್ರಪಾದೆಯ ಕೆಳಭಾಗ ತೀವ್ರ ಆಳವಾಗಿದ್ದರಿಂದ ಅಲೆಗಳೂ ಬಿರುಸಾಗಿದ್ದರಿಂದ ರಕ್ಷಣೆ ಸಾಧ್ಯವಾಗಿಲ್ಲ. ಕೆಲವೇ ಹೊತ್ತಿನಲ್ಲಿ ಶವ ಸಮುದ್ರದಲ್ಲಿ ತೇಲುತ್ತಿರುವುದನ್ನು ಗಮನಿಸಿದ ಗೃಹರಕ್ಷಕ ಸಿಬ್ಬಂದಿ ಪ್ರಸಾದ್ ಸುವರ್ಣ, ವೀನುಗಾರ ಸಾಗರ್, ಕರಾವಳಿ ಕಾವಲು ಪಡೆಯ ಮೋಹನ್, ಸುಜಿತ್, ಸೋಮೇಶ್ವರ ದೇವಸ್ಥಾನದ ಸಿಬ್ಬಂದಿ ವಿನಾಯಕ ಸಮುದ್ರಕ್ಕೆ ಧುಮುಕಿ ಅಲೆಗಳೊಂದಿಗೆ ಸೆಣಸಾಡಿ ಮೃತದೇಹ ದಡಕ್ಕೆ ತಂದರು.

ಪ್ರತಿಭಾನ್ವಿತರಾಗಿದ್ದ ಪವನ್ ಖಿನ್ನತೆಯಿಂದಾಗಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net