

ಬಂಟ್ವಾಳ: ಬಿ.ಮೂಡದ ಸ.ಪ.ಪೂ.ಕಾಲೇಜು ಎನ್ನೆಸ್ಸೆಸ್ ಘಟಕದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವು ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆರಂಭಗೊಂಡಿತು.
ನಿವೃತ್ತ ಮುಖ್ಯಶಿಕ್ಷಕ ನಾರಾಯಣ ನಾಯಕ್ ಕರ್ಪೆ ಶಿಬಿರ ಉದ್ಘಾಟಿಸಿ ಮಾತನಾಡಿ, ಶಿಬಿರಾರ್ಥಿಗಳು ಪ್ರೀತಿಯಿಂದ, ಇಷ್ಟಪಟ್ಟು ಎನ್ನೆಸ್ಸೆಸ್‌ನ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು, ಯಾವುದೇ ಪ್ರಶಂಸೆ ಅಥವಾ ಗುರುತಿಸುವಿಕೆಯ ಹಂಬಲ ಇರಬಾರದು. ಇದುವೇ ನೈಜ ಸೇವಾ ಮನೋಭಾವ ಎಂದು ಹೇಳಿದರು.
ಬಿ.ಮೂಡ ಪ.ಪೂ.ಕಾಲೇಜಿನ ಪ್ರಾಚಾರ್ಯ ಯೂಸುಫ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕೊಯಿಲ ಪ್ರೌಢ ಶಾಲೆಯ ಎಸ್ ಡಿಎಂಸಿ ಕಾರ್ಯಾಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು, ಭಾರತ ಸರ್ಕಾರದ ರಬ್ಬರ್ ಬೋರ್ಡ್ ನಿರ್ದೇಶಕ ವಸಂತ್ ಕುಮಾರ್ ಅಣ್ಣಳಿಕೆ, ಬಿ.ಮೂಡ ಪ.ಪೂ. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ, ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್‌ನ ಅಧ್ಯಕ್ಷ ಸುರೇಶ್ ಶೆಟ್ಟಿ, ಪತ್ರಕರ್ತ ಹರೀಶ್ ಮಾಂಬಾಡಿ ಮತ್ತು ಕೊಯ್ಲ ಶಾಲೆ ಮುಖ್ಯಶಿಕ್ಷಕಿ ಸೌಮ್ಯ ಎಚ್.ಇದ್ದರು.
ಶಿಬಿರಾಧಿಕಾರಿ ಬಾಲಕೃಷ್ಣ ನಾಯಕ್ ಕೆ.ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕನ್ನಡ ಭಾಷಾ ಉಪನ್ಯಾಸಕಿ ರಾಧಾ ನಿರೂಪಿಸಿದರು. ಆಂಗ್ಲ ಭಾಷೆ ಉಪನ್ಯಾಸಕ ದಾಮೋದರ್ ವಂದಿಸಿದರು. ಉಪನ್ಯಾಸಕರಾದ ಸೌಮ್ಯಾ ಕೆ., ದಿವ್ಯ ಹರ್ಷಿತಾ, ಇರ್ಷಾದ್ ಸಹಕರಿಸಿದರು.