ಪರ್ಯಾಯ ಪಾರ್ಕಿಂಗ್ ಜಾರಿ

Enforcement of alternative parking
ಕಾರವಾರದ ರಾಧಾಕೃಷ್ಣ ದೇವಸ್ಥಾನ ರಸ್ತೆಯಲ್ಲಿ ನೋ ಪಾರ್ಕಿಂಗ್ ಬೋರ್ಡ್
Published on

ಕಾರವಾರ: ನಗರದ ಟ್ರಾಫಿಕ್ ಸಮಸ್ಯೆ ಸುಧಾರಿಸಲು ಮುಂದಾಗಿರುವ ಸಂಚಾರ ಠಾಣೆ ಪೊಲೀಸರು ನಗರದ ಎರಡು ರಸ್ತೆಗಳಲ್ಲಿ ಪರ್ಯಾಯ ದಿನಗಳ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡಿದ್ದಾರೆ.

ಈ ಹಿಂದೆಯೇ ನಗರಸಭೆಯಿಂದ ಸಂಚಾರ, ವಾಹನ ನಿಲುಗಡೆ ಸಂಬಂಧ ಸೂಚನಾ ಲಕಗಳನ್ನು ಅಳವಡಿಸಲಾಗಿದೆ. ಪಾರ್ಕಿಂಗ್ ಸ್ಥಳಗಳನ್ನೂ ಗುರುತಿಸಿ ಅಧಿಸೂಚನೆ ಹೊರಡಿಸಲಾಗಿದೆ. ಅದಕ್ಕೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅನುಮತಿಯೂ ದೊರಕಿದೆ. ಆದರೆ, ಪಾರ್ಕಿಂಗ್ ನೀತಿ ಜಾರಿ ಮಾಡಲು ಮುಂದಾದಾಗ ವ್ಯಾಪಾರಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಎರಡು ವರ್ಷಗಳಿಂದ ಪಾರ್ಕಿಂಗ್ ನಿಯಮ ಜಾರಿ ನನೆಗುದಿಗೆ ಬಿದ್ದಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸಂಚಾರ ಪೊಲೀಸ್ ಠಾಣೆಯಿಂದ ರಾಧಾಕೃಷ್ಣ ದೇವಸ್ಥಾನ ರಸ್ತೆ ಹಾಗೂ ಪಕ್ಕದ ರಸ್ತೆ ಸೇರಿ ಎರಡು ಇಕ್ಕಟ್ಟಾದ ಸಂಪರ್ಕ ರಸ್ತೆಗಳಲ್ಲಿ ಪರ್ಯಾಯ ದಿನದ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಯಾವ ದಿನ ಎಲ್ಲಿ ವಾಹನ ನಿಲ್ಲಿಸಬಾರದು ಎಂಬ ಬಗ್ಗೆ ಠಾಣೆಯಿಂದ ‘ನೊ ಪಾರ್ಕಿಂಗ್ ಬೋರ್ಡ್’ ಅಳವಡಿಸಲಾಗುತ್ತಿದೆ. ಸಂಚಾರ ಪೊಲೀಸ್ ಸಿಬ್ಬಂದಿಯನ್ನೂ ನೇಮಿಸಲಾಗುತ್ತಿದೆ. ನಿಯಮ ಮೀರಿದಲ್ಲಿ ದಂಡ ಹಾಕುವ ಎಚ್ಚರಿಕೆಯನ್ನೂ ಪೊಲೀಸ್ ಸಿಬ್ಬಂದಿ ನೀಡುತ್ತಿದ್ದಾರೆ. ಕಳೆದ ಮೂರು ವಾರಗಳಿಂದ ಈ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಸಂಚಾರ ಠಾಣೆಯ ಪಿಎಸ್‌ಐ ಶ್ರೀಕಾಂತ ರಾಠೋಡ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net