ದತ್ತಿ ಇಲಾಖೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

udp-8-bannanje
Published on

ಉಡುಪಿ: ಧಾರ್ಮಿಕ ದತ್ತಿ ಇಲಾಖೆಯ ಆದೇಶದ ಮೇರೆಗೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿತು. ಕಾಶ್ಮೀರದ ಪಹಾಲ್ಗಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಭಾರತವು ಪಾಕ್ ಆಕ್ರಮಿತ ಭಯೋತ್ಪಾದಕರ ಶಿಬಿರದ ಮೇಲೆ "ಆಪರೇಷನ್ ಸಿಂಧೂರ್" ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ಯಶಶ್ವಿ ಯಾಗಿ ನಡೆಸಿದ್ದು, ಭಾರತೀಯ ಸೇನೆಗೆ ಭಗವಂತನು ಮತ್ತಷ್ಟು ಶಕ್ತಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಲಾಯಿತು.

ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ , ಕನ್ನರ್ಪಡಿ ಶ್ರೀ ಜಯದುರ್ಗಪರಮೇಶ್ವರಿ ದೇವಸ್ಥಾನ, ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ, ಕಾಪು ಶ್ರೀ ಲಕ್ಷ್ಮಿಜನಾರ್ದನ ದೇವಸ್ಥಾನ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ವ್ಯವಸ್ಥಾಪನ ಅಧ್ಯಕ್ಷರು, ಸದಸ್ಯರು, ಕಾರ್ಯನಿರ್ವಾಹಣಾಧಿಕಾರಿ, ತಂತ್ರಿಗಳು, ನೌಕರರ ವೃಂದ ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನಗರ ಬಿಜೆಪಿಯಿಂದ ಪೂಜೆ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಗರ ಬಿಜೆಪಿ ವತಿಯಿಂದ ಪ್ರದೋಷ ಪೂಜೆ ನಡೆಯಿತು. ದೇಶಕ್ಕಾಗಿ ಹೋರಾಡುತ್ತಿರುವ ಸೈನಿಕರಿಗೆ ದೇವರ ಶ್ರೀರಕ್ಷೆ ಇರಲಿ. ಶತ್ರುಗಳನ್ನು ಸದೆಬಡಿಯುವ ಶಕ್ತಿ ನೀಡಲಿ. ಲೋಕಕ್ಕೆ ಕಲ್ಯಾಣವಾಗಲಿ ಎಂದು ಅರ್ಚಕ ವಾಸುದೇವ ಉಪಾಧ್ಯಾಯ ಪ್ರಾರ್ಥನೆ ಸಲ್ಲಿಸಿದರು. ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಅಶೋಕ್ ನಾಯಕ್, ಸವಿತಾ ಹರೀಶ್, ರಶ್ಮಿ ಭಟ್, ಜಿ.ಟಿ. ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂದ್ಯಾ ರಮೇಶ್, ವೀಣಾ ಶೆಟ್ಟ, ರಶ್ಮಿತಾ ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

"ಆಪರೇಷನ್ ಸಿಂಧೂರ್" ಹೆಸರಿನಲ್ಲಿ ಭಾರತೀಯ ಸೈನ್ಯ ಯಶಸ್ವೀ ಕಾರ್ಯಾರಚಣೆ ನಡೆಸಿದೆ. ಆದರೆ ಅರ್ಬನ್ ನಕ್ಸಲ್ ಈ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತದ್ದಾರೆ. ಅವರಿಗೆ ದೇವರು ಸದ್ಬುದ್ಧಿ ನೀಡುವಂತಾಗಲಿ. ದೇಶ ರಕ್ಷಣೆ ಪಣ ತೊಟ್ಟಿರುವ ಪ್ರಧಾನಿ ಮೋದಿಯವರ ಶಕ್ತಿ ವೃದ್ಧಿಸಲಿ ಎಂಬುದಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಯಶಪಾಲ್ ಸುವರ್ಣ, ಶಾಸಕರು, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net