ಹುಬ್ಬಳ್ಳಿ: ಬಸವ ಕೇಂದ್ರದ ವತಿಯಿಂದ ಮುಂಡರಗಿಯ ಲಿಂಗೈಕ್ಯ ವೀರಮ್ಮ ಹಾಗೂ ಲಿಂಗಪ್ಪ ಮುದಿಮಲ್ಲಪ್ಪ ಲಿಂಗಶೆಟ್ಟರ ಇವರ ಸ್ಮರಣಾರ್ಥ ಸೆ. 7ರಂದು ಬೆಳಗ್ಗೆ 11ಕ್ಕೆ ಗೋಕುಲ ರಸ್ತೆ, ಮುರಾಜಿರ್ನಗರ 2ನೇ ಹಂತ, ಬಸವ ಕೇಂದ್ರದ ವಿ.ಎಂ. ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ದತ್ತಿ ಉಪನ್ಯಾಸ ಆಯೋಜಿಸಲಾಗಿದೆ.
ನಿವೃತ್ತ ಡಿಡಿಪಿಐ, ಅನುಭಾವಿಗಳಾದ ರುದ್ರಪ್ಪ ಚ. ಹಲಗತ್ತಿ ಅನುಭಾವ ನೀಡಲಿದ್ದಾರೆ. ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಳಾಳ ಅಧ್ಯಕ್ಷತೆ ವಹಿಸುವರು. ದತ್ತಿದಾನಿ ವಿದ್ಯಾವತಿ, ಬಸವರಾಜ ಲಿಂ. ಲಿಂಗಶೆಟ್ಟರ, ಅನಿಲಕುಮಾರ ಬಸವರಾಜ ಲಿಂಗಶೆಟ್ಟರ ಉಪಸ್ಥಿತರಿರುವರು ಎಂದು ಗ್ರಂಥಪಾಲಕ ಡಾ. ಸುರೇಶ ಹೊರಕೇರಿ ತಿಳಿಸಿದ್ದಾರೆ.