ಹುಬ್ಬಳ್ಳಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಹರ ಘಟಕದ ವತಿಯಿಂದ ಸುನಂದಾ ರಾಜಶೇಖರ ಹಿರೇಮಠ ದತ್ತಿ ಅಂಗವಾಗಿ ಅ. 15ರಂದು ಸಂಜೆ 4ಕ್ಕೆ ಇಲ್ಲಿಯ ಹೊಸೂರ ಕ್ರಾಸ್ ನಲ್ಲಿರುವ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಉಪನ್ಯಾಸ ಏರ್ಪಡಿಸಲಾಗಿದೆ.
ಚಿಂತಕ ಮುರಳೀಧರ ಮಳಗಿ ಉಪನ್ಯಾಸ ನೀಡುವರು. ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಪ್ರೊ. ಕೆ.ಎಸ್. ಕೌಜಲಗಿ, ಪ್ರಮೀಳಾ ಜಕ್ಕಣ್ಣವರ, ಸುನಂದಾ ಹಿರೇಮಠ ಇತರರು ಪಾಲ್ಗೊಳ್ಳುವರು.