ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನ ಅಗತ್ಯ

1.npk-2
ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದತ್ತಿನಿಧಿ ವಿತರಣಾ ಕಾರ್ಯಕ್ರಮದಲ್ಲಿ ಕೀಪಾಡಂಡ ಮೊಣ್ಣಪ್ಪ ಅವರು ಮಾತನಾಡಿದರು.
Published on

ನಾಪೋಕ್ಲು: ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮತ್ತು ಗುರಿಯ ಕಡೆಗೆ ಗಮನ ನೀಡಬೇಕೆಂದು ಕೀಪಾಡಂಡ ಮೊಣ್ಣಪ್ಪ ಹೇಳಿದರು.

ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ದತ್ತಿನಿಧಿ ವಿತರಣಾ ಕಾರ್ಯಕ್ರಮದಲ್ಲಿ ಕೀಪಾಡಂಡ ಬಸಪ್ಪ ಸ್ಮರಣಾರ್ಥ 1 ಲಕ್ಷ ರೂ. ದತ್ತಿನಿಧಿ ಸ್ಥಾಪಿಸಿದ ಕೀಪಾಡಂಡ ಮೊಣ್ಣಪ್ಪ ಅವರು 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ಮುಫೀದಾ ಅವರಿಗೆ 7000 ರೂ. ವಿತರಿಸಿ, ಮಾತನಾಡಿದರು.

ದತ್ತಿನಿಧಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಿ.ಎಸ್.ರಾಮಕೃಷ್ಣ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಇದೊಂದು ಪ್ರೇರಣಾದಾಯಕವಾದ ಅಂಶವಾಗಿದ್ದು, ಈ ಹಣವನ್ನು ತಮ್ಮ ಮುಂದಿನ ಕಲಿಕೆಗೆ ಬಳಸಿಕೊಳ್ಳುವುದರ ಮೂಲಕ ಉನ್ನತ ವ್ಯಾಸಂಗವನ್ನು ಮಾಡುವಂತಾಗಲಿ ಎಂದರು. ಈ ಸಂದರ್ಭದಲ್ಲಿ ಸಿಆರ್ ಲೋಕೇಶ್, ಸಹ ಶಿಕ್ಷಕ ಪರಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net