ಸಿಗ್ಮಾ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿ ತರಬೇತಿ ಕಾರ್ಯಕ್ರಮ

Endoscopy Training Program at Sigma Hospital
Published on

ಮೈಸೂರು: ಭಾರತೀಯ ಶಸ್ತ್ರಚಿಕಿತ್ಸಕರ ಸಂಘ ಹಾಗೂ ಸಿಗ್ಮಾ ಆಸ್ಪತ್ರೆ ವತಿಯಿಂದ ಶುಕ್ರವಾರ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಶಸ್ತ್ರಚಿಕಿತ್ಸಕರಿಗೆ ಎಂಡೋಸ್ಕೋಪಿ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಸಿಗ್ಮಾ ಆಸ್ಪತ್ರೆಯ ನಿರ್ದೇಶಕ ಡಾ.ಜಿ. ಸಿದ್ದೇಶ್ ಮಾತನಾಡಿ, ಯುವ ಶಸ್ತ್ರ ಚಿಕಿತ್ಸಕರು ಎಂಡೋಸ್ಕೋಪಿಯಲ್ಲಿ ಪರಿಣತಿ ಹೊಂದಬೇಕು ಎಂಬ ಉದ್ದೇಶದಿಂದ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಯುವ ಶಸ್ತ್ರಚಿಕಿತ್ಸಕರು ಇಲ್ಲಿ ತರಬೇತಿ ಪಡೆದು ಅದರ ಲಾಭ ರೋಗಿಗಳಿಗೆ ದೊರೆಯಲಿ ಎಂದು ಹಾರೈಸಿದರು.

ದೇಶದ ವಿವಿಧ ಭಾಗಗಳಿಂದ 16 ಯುವ ಶಸ್ತ್ರ ಚಿಕಿತ್ಸಕರು ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಎರಡು ದಿನಗಳ ತರಬೇತಿಯಲ್ಲಿ
ುುವ ಶಸ್ತ್ರಚಿಕಿತ್ಸಕರಿಗೆ ಎಂಡೋಸ್ಕೋಪಿ ಕುರಿತು ಸಮಗ್ರ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಲಾಗುವುದು. ಭಾರತೀಯ ಶಸ್ತ್ರಚಿಕಿತ್ಸಕರ ಸಂಘದಿಂದ ದೇಶದ ವಿವಿಧೆಡೆ ಈ ರೀತಿ 20 ತರಬೇತಿ ಕಾರ್ಯಕ್ರಮಗಳನ್ನು ಪ್ರಸಕ್ತ ವರ್ಷ ಹಮ್ಮಿಕೊಳ್ಳಲು ಉದ್ದೇಶಿಸ ಲಾಗಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಪ್ರಭೋನ್ ಯೋಗಿ, ಕಾರ್ಯದರ್ಶಿ ಪ್ರತಾಪ್ ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಮೈಸೂರು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಎಚ್.ಎನ್. ದಿನೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿಗ್ಮಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್, ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಅಂಜಲಿ ಸಿದ್ದೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net